ಬೆಂಗಳೂರು: ಮುಂಬೈನ ಸಿಂಗಲ್ ರೂಮಲ್ಲಿ ಇಲಿಗಳ ಜೊತೆ ವಾಸಿಸುತ್ತಿದ್ದ ಕಿಚ್ಚ ಸುದೀಪ್ ಇಂದು ನೂರಾರು ಕೋಟಿಯ ಒಡೆಯ .
ಸೆಪ್ಟೆಂಬರ್ 2 Kichcha Sudeep ಫ್ಯಾನ್ಸ್‌ಗೆ ಹಬ್ಬ. ಈ ವರ್ಷ ಫ್ಯಾನ್ಸ್ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡದಿದ್ದರೂ ಬರ್ತ್‌ಡೇ ಗಿಫ್ಟ್ ಆಗಿ ನಾಲ್ಕು ಹೊಸ ಸಿನಿಮಾಗಳ ಘೋಷಣೆ ಆಗುತ್ತೆ. ಬಿಲ್ಲರಂಗ ಭಾಷ ಸಿನಿಮಾದಿಂದ ಸುದೀಪ್ ಹೊಸ ಪೋಸ್ಟರ್ ಬಂದಿದೆ. ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ಸುದೀಪ್‌ಗೆ ಅಭಿಮಾನಿಗಳಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಅಭಿಮಾನಿಗಳು ಹೆಚ್ಚಲು ಸಾಲು ಸಾಲು ಹಿಟ್ ಸಿನಿಮಾಗಳು ಕಾರಣವಾದರೆ, ಎಸ್‌ಎಸ್ ರಾಜಮೌಳಿ ನಿರ್ದೇಶನದ ʼಈಗʼ ಸಿನಿಮಾದಲ್ಲಿನ ಅವರ ಅಮೋಘ ನಟನೆ ದೇಶಾದ್ಯಂತ ಅವರಿಗೆ ಫ್ಯಾನ್‌ಡಂ ಕ್ರಿಯೇಟ್ ಮಾಡಿದೆ.
ಇಂದು ಸುದೀಪ್ ಅವರು ಸುಮಾರು 167 ಕೋಟಿ ರು.ಗಳ ಅಧಿಪತಿ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದಾನೊಂದು ಕಾಲದಲ್ಲಿ ಅವರು ಸಣ್ಣ ಸಿಂಗಲ್ ರೂಮ್‌ನಲ್ಲಿ ಇಲಿಗಳ ಜೊತೆ ವಾಸ ಮಾಡ್ತಿದ್ದರು ಅನ್ನೋದನ್ನು ಇವತ್ತು ಯಾರಾದರೂ ನಂಬೋದಕ್ಕೆ ಸಾಧ್ಯವಾ!
ಗರ್ಲ್‌ಫ್ರೆಂಡ್ ಸ್ಕೂಟರ್‌ನಲ್ಲಿ ಓಡಾಟ ಇಂದು ಬಹಳ ಪವರ್‌ಫುಲ್ ಆಗಿ ಮಾತನಾಡುವ, ಬಿಗ್‌ಬಾಸ್‌ನಂಥಾ ಶೋವನ್ನು ಕಳೆದ 14 ವರ್ಷಗಳಿಂದ ಹೋಸ್ಟ್ ಮಾಡುತ್ತಿರುವ ಸುದೀಪ್ ಬಾಲ್ಯದಲ್ಲಿ ಬಹಳ ಸಂಕೋಚದ ವ್ಯಕ್ತಿಯಾಗಿದ್ದರಂತೆ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಸುದೀಪ್ ಇಂಜಿನಿಯರಿಂಗ್ ಪದವೀಧರ. ಕಾಲೇಜ್‌ನಲ್ಲೂ ಹೇಳಿಕೊಳ್ಳುವಂಥಾ ಗೆಳೆಯರಿರಲಿಲ್ಲ. ಒಂದು ಹಂತದಲ್ಲಿ ಲೈಫ್‌ನಲ್ಲಿ ಕೆಲಸವೂ ಇಲ್ಲದೇ ಕೆಲಸ ಸಿಗುವ ಭರವಸೆಯೂ ಇಲ್ಲದೇ ಕಷ್ಟದಲ್ಲಿ ದಿನದೂಡುತ್ತಿದ್ದಾಗ ಇವರ ಸಹಾಯಕ್ಕೆ ಬಂದಿದ್ದು ಇವರ ಗರ್ಲ್‌ಫ್ರೆಂಡ್. ಆಕೆಯ ಸ್ಕೂಟರ್‌ನಲ್ಲಿ ಸುದೀಪ್ ಅವರ ಓಡಾಟ ನಡೆಯುತ್ತಿತ್ತಂತೆ. ಅಂದಹಾಗೆ ಆ ಗರ್ಲ್‌ಫ್ರೆಂಡ್ ಈಗ ಅವರ ಹೆಂಡತಿ ಪ್ರಿಯಾ ರಾಧಾಕೃಷ್ಣನ್. ಪ್ರಿಯಾ ವೈದ್ಯಕೀಯ ಪದವೀಧರೆ.
ಕಿಚ್ಚ ಸುದೀಪ್ 167 ಕೋಟಿಗಳ ಒಡೆಯ
ಇಂದು ಕಿಚ್ಚ ಸುದೀಪ್ ಆಸ್ತಿ ಮೌಲ್ಯ 167 ಕೋಟಿ ರು. ಎಂದು ಅಂದಾಜಿಸಲಾಗಿದೆ. ಹಾಗಂತ ಅವರು ಸಮಾಜ ಸೇವೆಯಲ್ಲೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ನಾಲ್ಕು ಬಡ ಕುಟುಂಬದ ಉದ್ಧಾರಕ್ಕೆ ಮುಂದಾಗಿದ್ದಾರೆ. ಕಷ್ಟದಲ್ಲಿದ್ದ ನಾಲ್ವರಿಗೆ ತನ್ನ ತಾಯಿಯ ನೆನಪಿನಲ್ಲಿ ಆಟೋ ತೆಗೆಸಿಕೊಟ್ಟಿದ್ದಾರೆ. ಹಿಂದೆ ಅಭಿಮಾನಿಗಳ ಸಂಘದ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದರು. ಅವರು ಆರ್ಥಿಕವಾಗಿಯೂ ಸದೃಢರಾಗುತ್ತ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅವರಿಗೆ 22 ಕೋಟಿ ರು. ಮೌಲ್ಯದ ಐಷಾರಾಮಿ ಬಂಗಲೆ ಇದೆ. ಮುಂಬೈಯಲ್ಲೊಂದು ಫಾರ್ಮ್ ಹೌಸ್ ಇದೆ. ಹಲವೆಡೆ ಜಮೀನು, ರೆಸ್ಟೋರೆಂಟ್‌ಗಳಿವೆ. ಅನೇಕ ಐಷಾರಾಮಿ ಕಾರ್‌ಗಳಿವೆ. ಒಂದೂವರೆ ಕೋಟಿಯ ರಿಚರ್ಡ್ ಮಿಲ್ಲಿ ವಾಚ್ ಇದೆ. ಎಲ್ಲ ಸೇರಿದರೆ ಸುದೀಪ್ ಆಸ್ತಿಮೌಲ್ಯ ಸುಮಾರು 167 ರಿಂದ 170 ಕೋಟಿ ಅಂತ ಅಂದಾಜಿಸಲಾಗಿದೆ. ಸುದೀಪ್ ಸಂಭಾವನೆ ಎಷ್ಟು? ಸಿನಿಮಾಗಳಿಗೆ ಸುದೀಪ್ ಸಾಮಾನ್ಯವಾಗಿ 10 ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ. ಬಿಗ್‌ಬಾಸ್‌ಗೆ ಅವರ ಸಂಭಾವನೆ ಎಷ್ಟು ಎಂದು ಪತ್ರಕರ್ತರು ಕೇಳಿದರೆ ನನ್ನ ಯೋಗ್ಯತೆಗೆ ತಕ್ಕಷ್ಟು ಸಿಗುತ್ತದೆ ಎಂದು ಸುದೀಪ್ ಉತ್ತರಿಸುತ್ತಾರೆ. ಇತ್ತೀಚೆಗೆ ಅವರ ಸಂಭಾವನೆ ಹೆಚ್ಚಾಗಿದೆ ಎಂಬ ಮಾತೂ ಕೇಳಿ ಬರುತ್ತಿದೆ.
ಒಂದು ಕಾಲದಲ್ಲಿ ಇಲಿಗಳ ಜೊತೆಗೆ ವಾಸ ಈಗ ಇಷ್ಟೆಲ್ಲ ಐಷಾರಾಮಿ ಜೀವನ ನಡೆಸುತ್ತಿರುವ ಸುದೀಪ್ ಒಂದು ಕಾಲದಲ್ಲಿ ಮುಂಬೈನ ಕಿರಿದಾದ ರೂಮ್‌ನಲ್ಲಿ ರಾಶಿ ರಾಶಿ ಇಲಿಗಳ ಜೊತೆಗೆ ವಾಸವಿದ್ದರಂತೆ. ಆ ಕಥೆಯನ್ನು ತನ್ನ ಆಪ್ತರ ಜೊತೆ ಸುದೀಪ್ ಹಂಚಿಕೊಂಡಿದ್ದರು. ಸಣ್ಣ ರೂಮ್‌ನಲ್ಲಿ ರಾಶಿ ರಾಶಿ ಇಲಿಗಳು ಬರುತ್ತಿದ್ದವಂತೆ. ಊಟ, ತಿಂಡಿಯ ಜೊತೆಗೆ ಇವರ ಬಟ್ಟೆಗಳನ್ನೂ ಕಚ್ಚಿ ಹಾಕುತ್ತಿದ್ದವಂತೆ. ಆದರೆ ಸುದೀಪ್ ಈ ಇಲಿಗಳ ಜೊತೆಗೆ ಫ್ರೆಂಡ್‌ಶಿಪ್ ಶುರುಮಾಡ್ತಾರೆ. ಅವುಗಳಿಗಾಗಿಯೇ ಕೇಕ್ ಪೀಸ್‌ಗಳ ಇಡಲು ಶುರು ಮಾಡ್ತಾರೆ. ಇಲಿಗಳು ಇವರಿಗೆ ಹತ್ತಿರಾಗುತ್ತ ಬಂದವಂತೆ.
ಈ ಸಲನಾದ್ರೂ ಮಗಳ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಾರ?
ಪಬ್ಲಿಕ್ ಫಿಗರ್, ಸ್ಟಾರ್ ನಟ ಜೊತೆಗೆ ಹಲವರ ನೆಚ್ಚಿನ ನಟನಾದ ಸುದೀಪ್ ಎಷ್ಟೋ ಸಲ ಬರ್ತ್‌ಡೇ ಟೈಮಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ ಇರ್ತಾರೆ, ಇಲ್ಲವೇ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ತಾರೆ. ಆದರೆ ಈ ಬಾರಿ ಸುದೀಪ್ ಬರ್ತ್‌ಡೇ ಸೆಲೆಬ್ರೇಟ್ ಮಾಡಲ್ಲ ಎಂದು ಹೇಳಿದ್ದಾರೆ. ಹಿಂದಿನಿಂದಲೂ ಅಪ್ಪ ತನ್ನ ಹಾಗೂ ಫ್ಯಾಮಿಲಿ ಜೊತೆಗೆ ಬರ್ತ್‌ಡೇ ಆಚರಿಸುತ್ತಿಲ್ಲ ಎಂದು ಮಗಳು ಸಾನ್ವಿ ಸುದೀಪ್ ಕಂಪ್ಲೇಂಟ್ ಮಾಡುತ್ತಲೇ ಬಂದಿದ್ದರು. ಈ ಬಾರಿ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸದ ಕಾರಣ ಮಗಳ ಜೊತೆಗೆ ಸುದೀಪ್ ಜನ್ಮದಿನ ಆಚರಿಸಿಕೊಳ್ತಾರ ಅಂತ ಹೆಚ್ಚಿನವರು ಮಾತಾಡಿಕೊಳ್ತಿದ್ದಾರೆ.
