IMG-20240805-WA0034.jpg
Spread the love

ಕುಂದಾಪುರ: ದಿನಾಂಕ:28-08-2026(ಹಾಯ್ ಉಡುಪಿ ನ್ಯೂಸ್) ರಸ್ತೆ ಬದಿ ಗಿಡ ತೆರವು ಗೊಳಿಸುವ ವಿಚಾರದಲ್ಲಿ ನೆರೆ ಮನೆಯವರು ಬಂದು ಮಹಿಳೆ ಯೋರ್ವರಿಗೆ ಹಲ್ಲೆ ನಡೆಸಿರುವ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ಚರ್ಚ್ ರೋಡ್ ನಿವಾಸಿ ಅನಿತಾ ಶೇಟ್ (47) ಎಂಬವರು ದಿನಾಂಕ 28/08/2026 ರಂದು ಬೆಳಿಗ್ಗೆ  ಮನೆಯಲ್ಲಿರುವಾಗ ಕುಂದಾಪುರ ಪುರಸಭೆ ಕೆಲಸದವರು ಗಿಡ ಗಂಟಿಗಳನ್ನು ಸ್ವಚ್ಛ ಮಾಡಲು ಬಂದಿದ್ದು ಆ ಸಮಯ ಅನಿತಾ ಶೇಟ್ ರವರ ಮನೆಯ ಎದುರು ಇರುವ ಕ್ರೊಟಾನ್ ಗಿಡ ತೆಗೆಯಬೇಡಿ ಎಂದು ಅನಿತಾ ಶೇಟ್ ರವರು ಪುರಸಭೆ ಕೆಲಸದವರಿಗೆ ತಿಳಿಸಿದಾಗ ಅನಿತಾ ಶೇಟ್ ರವರ ಪಕ್ಕದ ಮನೆಯ ಆಪಾದಿತ ವೆಂಕಟೇಶ ಕಾಮತ್ ,.ರಾಮಚಂದ್ರ ಖಾರ್ವಿ ರವರು ಓಡೋಡಿ ಬಂದು ಅನಿತಾ ಶೇಟ್ ರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಂತರ ಅನಿತಾ ಶೇಟ್ ರನ್ನು ಕೈಯಿಂದ ಎಳೆದು ಕೆನ್ನೆಗೆ, ತಲೆಗೆ ಹಾಗೂ ಕಣ್ಣಿಗೆ ಕೈಯಿಂದ ಹೊಡೆದಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 73/2026 ಕಲಂ- 352 74 115(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!