IMG-20260827-WA0001.jpg
Spread the love

ಉಡುಪಿ: ದಿನಾಂಕ:27-08-2026(ಹಾಯ್ ಉಡುಪಿ ನ್ಯೂಸ್)

ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿ ಪಕ್ಷದವರ ಭ್ರಷ್ಟಾಚಾರಕ್ಕೆ ಸಾಕ್ಷಿಯೇ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹರಿದಾಡುತ್ತಿರುವ ಒಳ ಚರಂಡಿಯ ನೀರು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ .

ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ. ಒಳಚರಂಡಿಯ ಪೈಪ್ ಗಳ ಜೋಡಣೆ ಬೇರೆ ಮಾಡಿ ಹೊಸ ಪೈಪುಗಳನ್ನು ಅಳವಡಿಸಿದರೂ.ಕೂಡ ಒಳ ಚರಂಡಿಯ ನೀರು ರಸ್ತೆಯಲ್ಲಿ ಮತ್ತು ರಾಜ ಕಾಲುವೆಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಮರ್ಪಕ ಆದ ನಿರ್ವಹಣೆ ಇಲ್ಲದೆ ಒಟ್ಟಾರೆಯಾಗಿ ಬಿಜೆಪಿಯ ಸದಸ್ಯರುಗಳು ಹೇಳಿದಂತೆ ಇಲ್ಲಿ ನೂತನ ಪೈಪುಗಳನ್ನು ಅಳವಡಿಸಿ.ಕಾಮಗಾರಿ ನಡೆಸಲಾಗಿದೆ ಎಲ್ಲ ಕಾಮಗಾರಿಗಳು ಕೂಡ ಸಮರ್ಪಕವಾಗಿ ನಡೆಯದೆ ಎಲ್ಲಾ ಕಡೆಗಳಲ್ಲೂ ಒಳಚರಂಡಿಯ ನೀರು ಹರಿದಾಡುತ್ತಿದೆ.
ಇದಕ್ಕೆ ಕಾರಣ ಉಡುಪಿ ನಗರಸಭೆಯನ್ನು ಐದು ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಮತ್ತು ಬಿಜೆಪಿ ಆಡಳಿತದ ಸದಸ್ಯರು.

ಕೋಟ್ಯಾಂತರ ರುಪಾಯಿ ನಗರಸಭೆಯಿಂದ ವ್ಯಯಿಸಿದ ಹಣ ಎಲ್ಲಿ ಹೋಯಿತು?ಇದಕ್ಕೆ ಬಿಜೆಪಿಯ ಮಾಜಿ ನಗರಸಭಾ ಅಧ್ಯಕ್ಷರು ಮತ್ತು ಸದಸ್ಯರು ಉತ್ತರಿಸಬೇಕಾಗಿದೆ. ನಮ್ಮ ಶಿರಿಬೀಡು ವಾರ್ಡ್ನಲ್ಲಿ. ಮತ್ತು ಬನ್ನಂಜೆ ರಾಜ ಕಾಲುವೆಯಲ್ಲಿ ಮತ್ತು ರಸ್ತೆಯಲ್ಲಿ ಒಳ ಚರಂಡಿಯ ದುರ್ನಾಥದ ನೀರು ಹರಿದಾಡುತ್ತಿದ್ದು ಸ್ಥಳೀಯ ಜನಸಾಮಾನ್ಯರು ರೋಗದ ಭೀತಿಯಲ್ಲಿ ಇದ್ದಾರೆ.

ಸ್ಥಳೀಯವಾಗಿ ಎಲ್ಲ ಮನೆಗಳಲ್ಲಿ ಡೆಂಗ್ಯೂ ಜ್ವರ ಹರಡಿದ್ದು.ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ ಇದಕ್ಕೆಲ್ಲ ಮೂಲ ಕಾರಣ ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿಯವರೇ.ಒಳ ಚರಂಡಿಗೆ ಮೀಸಲಾಗಿಟ್ಟ ಕೋಟ್ಯಂತರ ಹಣದಿಂದ ಸಮರ್ಪಕವಾದ ಕೆಲಸ ಆಗದೆ,ಕೋಟ್ಯಾಂತರ ಹಣ ದುರ್ಬಳಕೆ ಆಗಿದೆ. ಇದಕ್ಕೆ ಮುಖ್ಯ ಕಾರಣವೇ ಬಿಜೆಪಿಯ ನಗರಸಭಾ ಆಡಳಿತ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರು ತಿಳಿಸಿರುತ್ತಾರೆ. ಮುಂದಿನ ದಿನಗಳಲ್ಲಿ ರಾಜ ಕಾಲುವೆಯಲ್ಲಿ ಒಳಚರಂಡಿಯ ನೀರು ಹರಿದರೆ ನಗರ ಸಭೆಯ ಎದುರಿನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!