Spread the love

ಅಲೆವೂರು: ಜೂನ್ ೫(ಹಾಯ್ ಉಡುಪಿ ನ್ಯೂಸ್) ಅಪರಿಚಿತ ವ್ಯಕ್ತಿಯೋರ್ವನ ಶವ ಅಲೆವೂರು ಪರಿಸರದಲ್ಲಿ ಪತ್ತೆಯಾಗಿದೆ.

ಅಲೆವೂರು ಸಂತೆ ಮಾರುಕಟ್ಟೆಯ ಬಳಿ ಕಳೆದ ಮೂರ್ನಾಲ್ಕು ದಿನಗಳಿಂದ ಸ್ಥಳೀಯರಿಗೆ ಕಂಡು ಬಂದಿದ್ದ ಯುವಕನೋರ್ವ ಇಂದು ಯಾವುದೋ ಕಾರಣದಿಂದ ಅಲೆವೂರು ಪೆಟ್ರೋಲ್ ಬಂಕ್ ಬಳಿಯ ಪೊದೆಯಲ್ಲಿ ಶವವಾಗಿ ಕಂಡು ಬಂದಿದ್ದಾನೆ ಎನ್ನಲಾಗಿದೆ.

ಅನ್ಯ ಜಿಲ್ಲೆಯವನಂತೆ ಕಾಣುವ ಯುವಕ ಅನಾರೋಗ್ಯ ದಿಂದಲೋ,ಹಸಿವಿನಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮ್ರತಪಟ್ಟಿರಬಹುದಾಗಿದ್ದು ನಿಜವಾದ ಕಾರಣ ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

ಶವವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು ; ಗುರುತು ಹಿಡಿದವರು, ಸಂಬಂಧಿಕರು ಮಣಿಪಾಲ ಪೊಲೀಸ್ ಠಾಣೆಯ ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: No Copying!