ಬೈಂದೂರು: ದಿನಾಂಕ :10/08/2026 (ಹಾಯ್ ಉಡುಪಿ ನ್ಯೂಸ್) ಗೋಳಿ ಹೊಳೆ ಜಂಕ್ಷನ್ ನ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಡೆಸುತ್ತಿದ್ದ ಮೂವರು ವ್ಯಕ್ತಿಗಳನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ್ ಅವರು ಬಂಧಿಸಿದ್ದಾರೆ.
ಗೋಳಿ ಹೊಳೆ ಜಂಕ್ಷನ್ ಬಸ್‌ನಿಲ್ದಾಣದ ಸಮೀಪದ ಶೇಖರ ಪೂಜಾರಿ ಎಂಬವರ ಅಂಗಡಿ ಎದುರು ಹೊರಾವರಣದಲ್ಲಿ ದಿನಾಂಕ:09-08-2026 ರಂದು ಮಧ್ಯಾಹ್ನ 1.ಶೇಖರ ಪೂಜಾರಿ 2. ಶಂಕರ ಮರಾಠಿ 3.ಮಾಧವ ಪೂಜಾರಿ ಈ ಮೂವರು ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಮಹೇಶ್ , ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು(ತನಿಖೆ) ಮಹೇಶ್ ಅವರು ದಾಳಿ ನಡೆಸಿದ ವೇಳೆ ಶಂಕರ ಮತ್ತು ಮಾಧವ ಪೂಜಾರಿ ರವರು ಸ್ಥಳದಿಂದ ಓಡಿ ಹೋಗಿದ್ದು ಅಪಾದಿತರು ಮದ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಲೋಟ ಮತ್ತು 90 ml ನ 2 Hywards whisky ಪ್ಯಾಕೇಟ್ ಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 15(a) KE Act ರಂತೆ ಪ್ರಕರಣ ದಾಖಲಾಗಿದೆ.
