images-17.jpeg
Spread the love

ಗಂಗೊಳ್ಳಿ: ದಿನಾಂಕ 04/08/2026 (ಹಾಯ್ ಉಡುಪಿ ನ್ಯೂಸ್) ನಾಡಾ ಗ್ರಾಮದ ನಂದ್ರೋಳಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸರೋಜಾ ಅವರು ದಿನಾಂಕ:02-08-2026 ರಂದು ಹಗಲು  ಕರ್ತವ್ಯದಲ್ಲಿರುವಾಗ ನಾಡಾ ಗ್ರಾಮದ ಕೋಣ್ಕಿಯ ನಂದ್ರೋಳಿ ಮನೆಯ ಸಾರ್ವಜನಿಕ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತಲುಪಿದ್ದಾರೆ .

ಸ್ಥಳದಲ್ಲಿ ಜನರು ಗುಂಪು ಸೇರಿದ್ದು ಇಬ್ಬರು 2 ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಳ (ಕತ್ತಿ) ನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರಿದು ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ್ದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದಾಗ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಕೋಳಿ ಅಂಕ ಆಟದಲ್ಲಿ ನಿರತರಾದ 1) ಸುಧಾಕರ (61),ಹಳಗೇರಿ ಕಂಬದಕೋಣೆ ಗ್ರಾಮ, ಬೈಂದೂರು, 2) ಸುರೇಶ (40),ಕಿರಿಮಜೇಶ್ವರ ಗ್ರಾಮ, ಬೈಂದೂರು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಉಳಿದವರು ಓಡಿ ಹೋಗಿರುತ್ತಾರೆ.

ಆರೋಪಿಗಳು ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 10 , ಕತ್ತಿ – 04 (ಕೋಳಿಬಾಳು) , ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, ನಗದು ಹಣ 2350/- ರೂಪಾಯಿ ಮತ್ತು 1) KA-20-HF-2915, 2) KA-27-E-S0081,3) KA-04-HF-4666, 4) KA-20-X-6743,5) KA-47-Y-0403, 6) KA-20-EW-9927, 7) KA-20-EK-0992, 8) KA-02-HU-4382 ಮೋಟಾರು ಸೈಕಲ್‌ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿತರು ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ  ಕಲಂ: 11(1)(a) ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಮತ್ತು 87, 93 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!