istockphoto-1405835660-612x612.jpg
Spread the love

ಕೋಟ: ದಿನಾಂಕ 04-08-2026 (ಹಾಯ್ ಉಡುಪಿ ನ್ಯೂಸ್) ಕ್ರೆಡಿಟ್ ಕಾರ್ಡ್ ಅಪ್ಡೇಟ್ ಮಾಡುವಂತೆ ಅಪರಿಚಿತರು ಕಳುಹಿಸಿದ ಲಿಂಕ್ ಒತ್ತಿದಾಗ ಮಹಿಳೆಯೋರ್ವರ ಖಾತೆಯಿಂದ 2 ಲಕ್ಷ ರೂಪಾಯಿ ಬೇರೆಯವರ ಖಾತೆಗೆ ವರ್ಗಾವಣೆಯಾಗಿರುವ ಬಗ್ಗೆ ವಂಚನೆಗೊಳಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಟ ನಿವಾಸಿ ಐಶ್ಚರ್ಯ ಎಂಬವರ ಕ್ರೆಡಿಟ್‌ ಕಾರ್ಡ್ ನಂಬ್ರಕ್ಕೆ ದಿನಾಂಕ: 27-07-2027 ರಂದು ಕಾರ್ಡ್ protection pla‌n ಅಪ್ಡೇಟ್‌ ಮಾಡುವಂತೆ ಅಪರಿಚಿತರು ಕರೆ ಮಾಡಿ ತಿಳಿಸಿದ್ದು ಗೂಗಲ್‌ ನಲ್ಲಿ ಕಳುಹಿಸಿದ ಲಿಂಕ್‌ ನಲ್ಲಿ icici .helpsuseronline ಕ್ಲೀಕ್‌ ಮಾಡಿದಾಗ ಐಶ್ವರ್ಯ ರವರ ಕ್ರೆಡಿಟ್‌ ಕಾರ್ಡನಲ್ಲಿರುವ 1,99,696.06/- ಹಣ ಹೋಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2026 ಕಲಂ:66(C),66(D) IT ACT ರಂತೆ ಪ್ರಕರಣ ದಾಖಲಾಗಿದೆ.

error: No Copying!