IMG_20260803_221428.jpg
Spread the love

ಬ್ರಹ್ಮಾವರ: ದಿನಾಂಕ : 03/08/2026 (ಹಾಯ್ ಉಡುಪಿ ನ್ಯೂಸ್) ಚಾಂತಾರು ಗ್ರಾಮದ ದಕ್ಷಿಣ್ ಬಾರ್ ಎಂಡ್ ಫ್ಯಾಮಿಲಿ ರೆಸ್ಟೋರೆಂಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುಕ್ತಾಬಾಯಿ ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುಕ್ತಾಬಾಯಿ ಅವರಿಗೆ ದಿನಾಂಕ: 01-08-2026 ರಂದು ಬಂದ ಸಾರ್ವಜನಿಕ ಮಾಹಿತಿಯ ಮೇರೆಗೆ ಚಾಂತಾರು ಗ್ರಾಮದ ದಕ್ಷಿಣ್ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿದಾಗ ಅಲ್ಲಿ ಆರೋಪಿ ಚಂದ್ರಶೇಖರ ಶೆಟ್ಟಿ (55), ಚಾಂತಾರು ಗ್ರಾಮ ,ಬ್ರಹ್ಮಾವರ ಎಂಬಾತ ಸಾರ್ವಜನಿಕರನ್ನು ಸೇರಿಸಿಕೊಂಡು 00 ರಿಂದ 99 ರೊಳಗಿನ ಸಂಖ್ಯೆಗೆ ರೂ. 1 ಕ್ಕೆ ರೂ. 70 ನೀಡುವುದಾಗಿ ಹೇಳಿ ಮಟ್ಕಾ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸಿ ಚೀಟಿಯಲ್ಲಿ ದಾಖಲಿಸುತ್ತಿರುವುದು ಕಂಡುಬಂದಿದ್ದು. ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಬಂಧಿತ ಆರೋಪಿ ಚಂದ್ರಶೇಖರ್ ಶೆಟ್ಟಿ ಯನ್ನು ವಿಚಾರಣೆ ನಡೆಸಿದಾಗ, ಆತನು ಸಂಗ್ರಹಿಸಿದ ಹಣವನ್ನು 2ನೇ ಆರೋಪಿ ರತ್ನಾಕರ ಶೆಟ್ಟಿ ಎಂಬವನಿಗೆ ನೀಡಿ ಇದಕ್ಕಾಗಿ ತನಗೆ ಕಮಿಷನ್ ದೊರೆಯುವುದಾಗಿ ತಿಳಿಸಿದ್ದು. ನಂತರ ಆರೋಪಿಯಿಂದ ಮಟ್ಕಾ ಚೀಟಿ-1, ಬಾಲ್‌ಪೆನ್-1 ಹಾಗೂ ನಗದು ರೂಪಾಯಿ 1,400/- ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 112 BNS ಮತ್ತು ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!