Spread the love

ಕಾಪು:ಮೇ೩(ಹಾಯ್ ಉಡುಪಿ ನ್ಯೂಸ್) ಗಾಂಜಾ ಅಮಲಿನಲ್ಲಿದ್ದ ಯುವಕನನ್ನು ಬಂಧಿಸಿದ ಘಟನೆ ಏಣಗುಡ್ಡೆ ಗ್ರಾಮದಲ್ಲಿ ನಡೆದಿದೆ.

ದಿನಾಂಕ 31/05/2022 ರಂದು ಬೆಳಗ್ಗೆ ಕಾಪು ಪೊಲೀಸ್ ಠಾಣೆ ಪೋಲಿಸ್ ಉಪನಿರೀಕ್ಷಕರಾದ ಶ್ರೀಶೈಲ ಮುರಗೋಡ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಏಣಗುಡ್ಡೆ  ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಅನುಮಾನಾಸ್ಪದವಾಗಿ ನಶೆಯಲ್ಲಿರುವಂತೆ ಓರ್ವ ಯುವಕ ಕಂಡು ಬಂದಿದ್ದು ಆತನು ಮಾದಕ ವಸ್ತು ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದು ಆತ ಏಣಗುಡ್ಡೆ ಗ್ರಾಮ ,ಅಗ್ರಹಾರ ನಿವಾಸಿ, ಅಶ್ಲೇಷ್ ಎ.ಕೋಟ್ಯಾನ್ ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ  ಇವರ  ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 02/06/2022 ರಂದು ಆತ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!