ಕೊಲ್ಲೂರು: ಹೆಂಡತಿ ಹಾಗೂ ಮಾವ ಜೊತೆಯಾಗಿ ಹಲ್ಲೆ ನಡೆಸಿರುವ ಬಗ್ಗೆ ಕರುಣಾಕರ ಮೊಗವೀರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ,ನಾಡಗುಡ್ಡೆಯಂಗಡಿ ಗ್ರಾಮದ ನಿವಾಸಿ ಕರುಣಾಕರ ಮೊಗವೀರ (37)ಎಂಬವರು ಶಕೀಲಾ ಎಂಬುವವರನ್ನು ಸುಮಾರು 12 ವರ್ಷದ ಹಿಂದೆ ಮದುವೆ ಆಗಿದ್ದು, ವಾರಕ್ಕೆ ಓಮ್ಮೆ ಅಥವಾ ಎರಡು ಬಾರಿ ಹೆಂಡತಿ ಮನೆಗೆ ಹೋಗಿ ಬರುತ್ತಾ ಇದ್ದು, ಇತ್ತೀಚೆಗೆ ಹೆಂಡತಿಯಿಂದ ಮಧ್ಯೆ ಕೆಲವೊಂದು ಸಾಂಸಾರಿಕ ವಿಚಾರಗಳಿಗಾಗಿ ಅಸಮಧಾನ ಉಂಟಾಗಿರುತ್ತದೆ.
ಕರುಣಾಕರ ಮೊಗವೀರರು ದಿನಾಂಕ 28/07/2026 ರಂದು ಮಧ್ಯಾಹ್ನ ತನ್ನ ಅಕ್ಕ ಲಕ್ಷ್ಮೀ ರವರ ಜೊತೆಯಲ್ಲಿ ತನ್ನ ಹೆಂಡತಿ ಶಕೀಲಾ ರವರ ಮನೆಗೆ ಹೋಗಿದ್ದು, ಮನೆಯಲ್ಲಿ ಶಕೀಲಾ ಮತ್ತು ಶಕೀಲಾ ತಂದೆ ಶೀನಾ ಮೊಗವೀರ ರವರು ಇದ್ದು, ಕರುಣಾಕರ ಮೊಗವೀರರು ಶೀನಾ ಮೊಗವೀರ ರವರ ಬಳಿ ನಿಮ್ಮ ಮಗಳು ಮಾಡುತ್ತಿರುವುದು ಸರಿಯಲ್ಲ ನೀವು ಸ್ವಲ್ಪ ಬುದ್ದಿ ಹೇಳಿ ಎಂಬುದಾಗಿ ಹೇಳಿದಾಗ, ಹೆಂಡತಿ ಶಕೀಲಾ ಅವರು ಕರುಣಾಕರ ಮೊಗವೀರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದು, ನಂತರ ಕರುಣಾಕರ ಮೊಗವೀರರಿಗೆ ಶಕೀಲಾ ಮತ್ತು ಶೀನಾ ಮೊಗವೀರ ರವರು ಕೈಯಿಂದ ಹೊಡೆದು ಮನೆಯ ಒಳಗಡೆಯಿಂದ ಹೊರಗಡೆ ಬಾರದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಮತ್ತು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು, ನಂತರ ಕರುಣಾಕರ ಮೊಗವೀರರ ಅಕ್ಕ ಲಕ್ಷ್ಮಿ ರವರು ಬಿಡಿಸಿ ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿರುತ್ತಾರೆ.
ಈ ಘಟನೆಗೆ ವಿಲ್ಸನ್ ರವರ ತೋಟದಲ್ಲಿ ಕೆಲಸ ಮಾಡುವ ದಿನಕರ ಮೂಡುಬಗೆ ಎಂಬಾತನ ಕುಮ್ಮಕ್ಕು ಕಾರಣವಾಗಿರುವುದಾಗಿದೆ ಎಂದು ಕರುಣಾಕರ ಮೊಗವೀರರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 126(2), 115(2), 352, 351(2), 49 BNS ರಂತೆ ಪ್ರಕರಣ ದಾಖಲಾಗಿದೆ.
