ಉಡುಪಿ: ಜೂನ್ ೨(ಹಾಯ್ ಉಡುಪಿ ನ್ಯೂಸ್) ಚಿಲ್ಲರೆ ಕೇಳುವ ನೆಪದಲ್ಲಿ ಅಂಗಡಿಯೊಂದರಲ್ಲಿ ಕಳ್ಳತನ ನಡೆಸಿದ ಘಟನೆ ನಡೆದಿದೆ.
ಉಡುಪಿ ನಗರದ ಬೀಡಿನಗುಡ್ಡೆಯ ಹರಿಶ್ಚಂದ್ರ ಮಾರ್ಗದಲ್ಲಿ ರುವ ದಿನಸಿ ಅಂಗಡಿಯಲ್ಲಿ ಹಾಡು ಹಗಲೇ ಚಾಲಾಕಿ ಕಳ್ಳನೋರ್ವ ಕೈ ಚಳಕ ತೋರಿಸುವ ಮೂಲಕ ಅಂಗಡಿ ಮಾಲೀಕರನ್ನು ಯಾಮಾರಿಸಿ ದುಡ್ಡಿನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಂಗಡಿಯ ಎದುರು ಕಾರಿನಿಂದ ಬಂದು ಇಳಿದ ಕಳ್ಳ ಅಂಗಡಿಯ ಒಳಗೆ ಬಂದು ಮಾಲಕರ ಬಳಿ 500 ರೂಪಾಯಿ ಗಳ ಚಿಲ್ಲರೆ ಕೇಳಿದ್ದಾನೆ, ಕಾರಿನಿಂದ ಬಂದು ಇಳಿದವ ದೊಡ್ಡ ಮನುಷ್ಯ ಎಂದು ತಿಳಿದು ಅಂಗಡಿ ಮಾಲೀಕರು ಚಿಲ್ಲರೆ ಕೊಡಲು ನೋಟು ಎಣಿಸುತ್ತಾ ಇರುವಾಗ ದೊಡ್ಡ ಮನುಷ್ಯ ಚಾಲಾಕಿ ಕಳ್ಳನಾಗಿ ಕ್ಷಣಾರ್ಧದಲ್ಲಿ ಅಂಗಡಿ ಮಾಲೀಕರ ದುಡ್ಡಿನ ಪರ್ಸನ್ನೇ ಎತ್ತಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪರ್ಸಿನಲ್ಲಿ 35,000 ರೂಪಾಯಿಗಳಷ್ಟು ಹಣವಿತ್ತೆನ್ನಲಾಗಿದ್ದು ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ರೀತಿಯ ಘಟನೆ ಕೆಲವು ದಿನಗಳ ಹಿಂದೆ ಎಮ್.ಜಿ.ಎಮ್ ಕಾಲೇಜು ಬಳಿಯ ಗೂಡಂಗಡಿ ಮಾಲಕರಿಗೂ ಆಗಿದ್ದು ,ಅವರ ಹಣದ ಬ್ಯಾಗನ್ನೂ ಇದೇ ರೀತಿ ಕಸಿದು ಕಳ್ಳ ಪರಾರಿಯಾಗಿದ್ದ. ಉಡುಪಿಯಲ್ಲಿ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವ್ಯಾಪಾರಸ್ಥರು ಜಾಗ್ರತೆಯಿಂದ ವ್ಯವಹರಿಸ ಬೇಕಾಗಿದೆ.ಪೋಲಿಸ್ ಇಲಾಖೆ ನಗರದಲ್ಲಿ ಕಳ್ಳರ ಕಾಟವನ್ನು ನಿಯಂತ್ರಿಸಲು ಹೆಚ್ಚಿನ ಗಮನ ಹರಿಸಬೇಕಾಗಿದೆ.