images-3.jpeg
Spread the love

ಕಾಪು: ದಿನಾಂಕ:14-07-2026(ಹಾಯ್ ಉಡುಪಿ ನ್ಯೂಸ್) ಹಲ್ಲೆ ಪ್ರಕರಣ ವೊಂದನ್ನು ವಾಟ್ಸಾಪ್ ಗ್ರೂಫ್ ನಲ್ಲಿ ಖಂಡಿಸಿದ ವಿಚಾರವಾಗಿ ಸಮಾಜ ಸೇವಕರೋರ್ವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪು,ಉಳಿಯಾರಗೊಳಿ, ಪೊಲಿಪು ನಿವಾಸಿ ಮೊಹಮ್ಮದ್‌ ಆಸೀಫ್‌ (43)  ಇವರು ಅಂಬ್ಯುಲೆನ್ಸ್‌ ಚಾಲಕ ಹಾಗೂ ಸಮಾಜ ಸೇವೆ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 08/07/2026 ರಂದು ಸುರತ್ಕಲ್‌ ನ ಕೃಷ್ಣಾಪುರ ಮದರಸದ ಉಸ್ತಾದ ಎಂಬವರು ಶಂಶು ಎಂಬಾತನ ಮಗುವಿಗೆ ವಿಧ್ಯಾಭ್ಯಾಸ ಕಲಿಸುವ ಸಂದಭ೯ ಹೊಡೆದ ಬಗ್ಗೆ ಶಂಶು ರವರು ಕೋಪಿತಗೊಂಡು ನೇರವಾಗಿ ಮದರಸಕ್ಕೆ ಹೋಗಿ ಅಲ್ಲಿಯ ಆಡಳಿತ ಸಮಿತಿ ಯವರಿಗೆ ತಿಳಿಸದೇ ನೇರವಾಗಿ ಮದರಸದ ಒಳಗೆ ಪ್ರವೇಶಿಸಿ ಉಸ್ತಾದ್‌ ರವರು ಊಟಕ್ಕೆ ಕೂತ ಸಂದಭ೯ದಲ್ಲಿ ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಆಸಿಫ್ ರವರು “ಆಪತ್ಬಾಂಧವ ಫ್ರೆಂಡ್ಸ್‌” ವಾಟ್ಸ್‌ ಪ್ ಗ್ರೂಪ್‌ನಲ್ಲಿ ಖಂಡಿಸಿರುತ್ತಾರೆ. ಮೊಹಮ್ಮದ್ ಆಸಿಫ್ ರು “ಆಪತ್ಬಾಂಧವ ಫ್ರೆಂಡ್ಸ್‌” ವಾಟ್ಸ್‌ ಪ್ ಗ್ರೂಪ್‌ನ ಅಡ್ಮಿನ್‌ ಆಗಿದ್ದು ಅದರಲ್ಲಿ ಒಟ್ಟು 950 ಜನ ಸದಸ್ಯರುಗಳು ಇರುತ್ತಾರೆ. ಈ ವಿಚಾರದಲ್ಲಿ ದಿನಾಂಕ: 09/07/2026 ರಂದು ಬೆಳಗ್ಗಿನ ಜಾವ 00:30 ಗಂಟೆಯ ಹೊತ್ತಿಗೆ ಕಾಪುವಿನಿಂದ ಬೆಳಪು ಮನೆಗೆ ಹೋಗುತ್ತಿರುವ ಸಂದಭ೯ದಲ್ಲಿ ಮೊಹಮ್ಮದ್ ಆಸಿಫ್ ರು ಮೊಬೈಲ್‌ ನಂಬ್ರಕ್ಕೆ ಅಪರಿಚಿತ ವ್ಯಕ್ತಿಗಳು Spam ನಂಬರುಗಳಿಂದ ಮೊಹಮ್ಮದ್ ಆಸಿಫ್ ರನ್ನು ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುವುದಲ್ಲದೆ ಇನ್ನೂ ಕೆಲವೊಂದು ನಂಬರುಗಳಿಂದ ತನ್ನ ಹೆಂಡತಿಯನ್ನು ಉದ್ದೇಶಿಸಿ ಆಕೆಯ ಮಾನ ಹಾಗೂ ಗೌರವಕ್ಕೆ ಧಕ್ಕೆ ಬರುವಂತೆ ಹಾಗೂ ಭಯವನ್ನು ಉಂಟು ಮಾಡುವ ದೃಷ್ಟಿಯಿಂದ ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ . ಮೊಹಮ್ಮದ್ ಆಸಿಫ್ ರ ಹೆಂಡತಿ ಮಾನಸಿಕ ಖಾಯಿಲೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈ ವಿಚಾರ ಕೇಳಿ ಇನ್ನೂ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 79, 351(3), 351(4), 352 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!