ದಿನಾಂಕ:12-07-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ವಕೀಲರ ಸಂಘದ ಸಕ್ರಿಯ ಸದಸ್ಯರೂ, ನ್ಯಾಯವಾದಿಗಳೂ ಆದ ಸಂದೇಶ್ ಕುಮಾರ್ ಅವರು ಇಂದು ನಿಧನರಾಗಿದ್ದಾರೆ.
ಸಂದೇಶ್ ಕುಮಾರ್ ರವರ ಅಕಾಲಿಕ ನಿಧನ ಮತ್ತು ಅಗಲುವಿಕೆಯು ಅವರ ಕುಟುಂಬದವರಿಗೆ, ಹಿತೈಷಿಗಳಿಗೆ ಹಾಗೂ ವಕೀಲ ಮಿತ್ರರಿಗೆ ತೀವ್ರ ದಿಗ್ಭ್ರಮೆ ಮತ್ತು ಆಘಾತವನ್ನು ಉಂಟು ಮಾಡಿದೆ.
ಮೃತರ ಪಾರ್ಥಿವ ಶರೀರದ ವಿಧಿ ವಿಧಾನಗಳನ್ನು ಇಂದು ಸಂಜೆ 3:30ಕ್ಕೆ ಅವರ ಸ್ವಗೃಹವಾದ ಕಡೆಕಾರಿನಲ್ಲಿ ನೆರವೇರಿಸಲಾಗುವುದು. ತದನಂತರ ಉದ್ಯಾವಾರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯು ಜರುಗಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.
