ಉಡುಪಿ: ದಿನಾಂಕ: 12-07-2026 (ಹಾಯ್ ಉಡುಪಿ ನ್ಯೂಸ್)
ನಗರದ ತೆಂಕ ಪೇಟೆಯಲ್ಲಿ ರಸ್ತೆ ಮಧ್ಯೆ ಬ್ರಹತ್ ಗಾತ್ರದ ಹೊಂಡ ವಾಗಿದ್ದು ವಾಹನ ಸವಾರರಿಗೆ ಸಂಚರಿಸಲು ಅಸಾಧ್ಯ ವಾಗಿತ್ತು. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಾದ ನಗರಸಭೆಯ ಅಧಿಕಾರಿಗಳು ಕನಿಷ್ಠ ಪೌರಕಾರ್ಮಿಕರಿಂದ ಮಣ್ಣು ಮುಚ್ಚಿ ಸುವ ಕೆಲಸವನ್ನೂ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ.
ವಾಹನ ಸವಾರರಿಗೆ ಮಳೆಯ ಪರಿಣಾಮವಾಗಿ ಉಡುಪಿಯ ತೆಂಕಪೇಟೆಯ ರಸ್ತೆಯಲ್ಲಿ ಉಂಟಾಗಿದ್ದ ಅಪಾಯಕಾರಿ ಹೊಂಡದಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಉಡುಪಿ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕಾರಿ ಹುಸೇನಸಾಬ ಚಪ್ಪರಕರ್ ಹಾಗೂ
ಸಿಬ್ಬಂದಿಯವರಾದ ರಾಜಪ್ಪ ಪಿಸಿ ರವರು ಸ್ಥಳಕ್ಕೆ ತೆರಳಿ ಸ್ವತಃ ಕಲ್ಲು, ಮಣ್ಣು ತಂದು ಹಾಕಿ ತಾತ್ಕಾಲಿಕವಾಗಿ ಹೊಂಡವನ್ನು ಮುಚ್ಚುವ ಮೂಲಕ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಂಡರು. ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯ ದ ನಡುವೆ ನಗರಸಭೆ ಮಾಡಬೇಕಾದ ಕರ್ತವ್ಯ ವನ್ನೂ ನಿರ್ವಹಿಸಿರುವುದಕ್ಕೆ ಸಾರ್ವಜನಿಕ ರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಕರ್ತವ್ಯ ದೊಂದಿಗೆ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಹಾಯ್ ಉಡುಪಿ ಪತ್ರಿಕೆ ಯು ಅಭಿನಂದಿಸುತ್ತದೆ. ಹಾಗೂ ಉಡುಪಿ ಪೊಲೀಸರಿಂದ ಇಂತಹ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸುತ್ತೇವೆ.


