IMG-20240805-WA0034.jpg
Spread the love

ಕುಂದಾಪುರ: ಗುಲ್ವಾಡಿ, ಮುಸ್ಲಿಂ ಕೇರಿ ನಿವಾಸಿ ಮಹಿಳೆ ಯೋರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ರಮ್ಜಿಯಾ ಎಂಬ ಮಹಿಳೆಯು 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಲ್ವಾಡಿ,ಮುಸ್ಲಿಂಕೇರಿ ನಿವಾಸಿ ತಸ್ಲೀಮಾ (23) ಎಂಬವರ ಗಂಡ ಮುಸ್ತಾಫ್‌ ರವರಿಗೆ ಸುಮಾರು 2 ವರ್ಷಗಳ ಹಿಂದೆ ಗುಲ್ವಾಡಿ ಗ್ರಾಮದ ಬೊಳಕಟ್ಟೆ ನಿವಾಸಿಯಾದ ರಮ್ಜಿಯಾ ಎಂಬ ಮಹಿಳೆಯ ಪರಿಚಯವಾಗಿದ್ದು ಪರಸ್ಪರ ಫೋನ್‌ ನಲ್ಲಿ ಮಾತನಾಡಿಕೊಂಡಿದ್ದರು. ಅವರುಗಳ ಮಧ್ಯೆ ಹಣಕಾಸು ವ್ಯವಹಾರ ನಡೆದಿದ್ದು ಈ ಬಗ್ಗೆ ಕಂಡ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ನಂತರ ಈ ವಿಚಾರದಲ್ಲಿ ಪರಸ್ಪರ ರಾಜಿ ಮಾಡಿಕೊಂಡು ದೂರನ್ನು ಹಿಂಪಡೆದಿರುತ್ತಾರೆ. ಹೀಗಿರುವಾಗ  ದಿನಾಂಕ: 11/07/2026 ರಂದು ಬೆಳಿಗ್ಗೆ 08:00 ಗಂಟೆಗೆ ರಮ್ಜಿಯಾರವರು ತಸ್ಲೀಮಾರ ಮನೆಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ತಸ್ಲೀಮಾರ ಗಂಡನಿಗೆ ನೀನು ನನಗೆ 3 ಲಕ್ಷ ಹಣವನ್ನು ಕೊಡು ಇಲ್ಲವಾದಲ್ಲಿ ನಾನು ಹೋಗುವುದಿಲ್ಲ ಇಲ್ಲಿಯೇ ಕುಳಿತು ಕೊಳ್ಳುತ್ತೇನೆ ಹಾಗೂ ಮನೆಯವರನ್ನು ಕರೆಯಿಸಿ ತೊಂದರೆ ಕೊಡುತ್ತೇನೆ. ಹಣ ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ತಸ್ಲೀಮಾರು ರಮ್ಜಿಯಾ ಳಿಗೆ ಮನೆಯಿಂದ ಹೊರಗಡೆ ಹೋಗುವಂತೆ ಹೇಳಿದಾಗ ತಸ್ಲೀಮಾರಿಗೂ ಕೂಡಾ ಈ ವಿಚಾರಕ್ಕೆ ನೀನು ಬರಬೇಡ ನನ್ನ ತಂಟೆಗೆ ನೀನು ಬಂದರೆ ನಿನ್ನನ್ನು ಬಿಡುವುದಿಲ್ಲ. ಕೈಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ತಸ್ಲೀಮಾರ ಗಂಡನಿಂದ ಈಗಾಗಲೇ ರಮ್ಜಿಯಾರವರು 60,000/- ರೂ ಹಣವನ್ನು ತೆಗೆದುಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಸ್ಲೀಮಾರವರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 329(4), 352,351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!