ಉಡುಪಿ: ದಿನಾಂಕ:05-07-2026 (ಹಾಯ್ ಉಡುಪಿ ನ್ಯೂಸ್)ಮ್ರತ ವ್ಯಕ್ತಿಯು ಕೊಡಬೇಕಾದ ಬಾಕಿ ಐದು ಲಕ್ಷ ರೂಪಾಯಿ ಹಣವನ್ನು ಕೊಡಬೇಕೆಂದು ಮ್ರತ ವ್ಯಕ್ತಿಯ ತಂದೆ ಗೆ ಅಪರಿಚಿತರು ಬೆದರಿಕೆ ಹಾಕಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಕ್ಕಿಕಟ್ಟೆ , ಇಂದಿರಾನಗರ ನಿವಾಸಿ ಅಶೋಕ ಪಡಿಯಾರ್ (63) ಎಂಬವರಿಗೆ ದಿನಾಂಕ; 02/07/2026 ರಂದು ಮೊಬೈಲ್ ನಿಂದ ಸಂಜೆ ಹೊತ್ತು ಒಂದು ವಾಟ್ಸ್‌ಪ್ ಕರೆ ಬಂದಿದ್ದು ಕರೆಯನ್ನು ಸ್ವೀಕರಿಸಿದಾಗ ವ್ಯಕ್ತಿ ಹಿಂದಿ ಬಾಷೆಯಲ್ಲಿ ನೀವು ಅಜಿತ್ ಪಡಿಯಾರ್‌ರವರ ತಂದೆಯಾ? ಎಂಬುದಾಗಿ ಕೇಳಿ ಅಜಿತ್ ಪಡಿಯಾರ್ ನಮ್ಮ ಬಳಿ ವಜ್ರದ ವ್ಯವಹಾರ ಮಾಡಿದ್ದು ಸದ್ರಿ ವಜ್ರದ ಬಾಬ್ತು ಹಣವನ್ನು ಬಾಕಿ ಇಟ್ಟಿದ್ದು ಅದರಲ್ಲಿ ಬಾಕಿ ಇರುವ 5 ಲಕ್ಷ ರೂವನ್ನು ನೀವು ಕೊಡಬೇಕು ಎಂದು ಅಶೋಕ ಪಡಿಯಾರಿಗೆ ತಿಳಿಸಿದರು.
ಅಶೋಕ ಪಡಿಯಾರರು ತನ್ನ ಮಗ ಅಜಿತ್ ಪಡಿಯಾರ್ ಎಂಟು ವರ್ಷದ ಹಿಂದೆ ತೀರಿಹೋಗಿದ್ದು ಈ ಬಗ್ಗೆ ಯಾವುದೇ ವಿಚಾರ ತಿಳಿದಿರುವುದಿಲ್ಲ ಆದ್ದರಿಂದ ಹಣ ಕೊಡಲು ಆಗುವುದಿಲ್ಲ ಎಂಬುದಾಗಿ ತಿಳಿಸಿದರು. ಈ ಕರೆಯು +966576550765 ರಿಂದ ಬಂದಿರುತ್ತದೆ. ನಂತರ ದಿನಾಂಕ: 02/07/2026 ರಂದು ಬೆಳಿಗ್ಗೆ ದುಬಾಯಿಯಲ್ಲಿರುವ ಅಶೋಕ ಪಡಿಯಾರರ 2 ನೇ ಮಗ ಅಮೀತ್ ಕೂಡ ಪೋನ್ ಕರೆ ಮಾಡಿ ತನ್ನ ದುಬಾಯಿ ಫೋನ್ ನಂಬರಿಗೆ 0528310018 ನೇದಕ್ಕೆ ವಾಟ್ಸ್‌ಪ್ ಕರೆ ಮಾಡಿ ಅಣ್ಣ ಅಜೀತನ ಬಾಬ್ತು ಬಾಕಿ 5 ಲಕ್ಷ ರೂ ಕೊಡಬೇಕು ಇಲ್ಲದಿದ್ದರೆ ಊರಿನಲ್ಲಿರುವ ಕುಟುಂಬದವರಿಗೆ ತೊಂದರೆ ನೀಡುವುದಾಗಿ ಬೆದರಿಸಿ ಹಣವನ್ನು ಕೊಡುವಂತೆ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಲಂ: 308(1)(E) 351(4)BNS ರಂತೆ ಪ್ರಕರಣ ದಾಖಲಾಗಿದೆ.
