ಶಿರ್ವ: ದಿನಾಂಕ :02-07-2026 (ಹಾಯ್ ಉಡುಪಿ ನ್ಯೂಸ್) ಕಾರೊಂದರಲ್ಲಿ ಫ್ಯೂಯಲ್ ಬಂಕ್ ಗೆ ಡೀಸೆಲ್ ತುಂಬಿಸಲು ಬಂದ ಮೂವರು ವ್ಯಕ್ತಿಗಳು ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾಗಿರುವ ಘಟನೆ ಶಿರ್ವ ದಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಕುರ್ಕಾಲು ಗ್ರಾಮದ ಸುಭಾಸ್ ನಗರದ ನಿವಾಸಿ ಆಶಿಶ್ (27) ಇವರ ಹೆಂಡತಿಯ ತಂದೆ ಡೇನಿಯಲ್ ಸಿ ಅಮ್ಮಣ್ಣ ಎಂಬುವವರಿಗೆ ಸೇರಿದ ಆಶಿಶ್ ರವರು ಉಸ್ತುವಾರಿ ನೋಡಿಕೊಳ್ಳುವ ಫಿಲ್ಲಿಂಗ್ ಸ್ಟೇಷನ್ ಎಂಬ ಹೆಸರಿನ ಫ್ಯೂಲ್ ಬಂಕ್‌ಗೆ ದಿನಾಂಕ:27-06-2026 ರಂದು ಫೋರ್ಡ್ ಕಂಪೆನಿಯ ECO sports ಮಾದರಿಯ ಬಿಳಿ ಬಣ್ಣದ KA-14-MB-8452 ನೋಂದಣೆ ಸಂಖ್ಯೆಯ ಕಾರಿನಲ್ಲಿ ಬಂದ 3 ಜನ ವ್ಯಕ್ತಿಗಳ ಪೈಕಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಫ್ಯೂಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ಎಂಬುವವರಲ್ಲಿ ಕಾರಿಗೆ ಫುಲ್ ಟ್ಯಾಂಕ್ ಡೀಸೆಲನ್ನು ತುಂಬಿಸುವಂತೆ ತಿಳಿಸಿದಂತೆ ಶಶಾಂಕ್‌ರವರು ಕಾರಿಗೆ ಡೀಸೆಲನ್ನು ತುಂಬಿಸಿ ಡಿಸೇಲ್ ಬಾಬ್ತು 4711.09 ರೂಪಾಯಿ ಪಾವತಿ ಮಾಡಲು QR Code ತಿಳಿಸಿದಾಗ ಶಶಾಂಕ್ ಅವರು QR Code ನೀಡಿದಾಗ QR Code ಸ್ಕ್ಯಾನ್ ಮಾಡಿ, ಬಿಲ್ ನೀಡುವಂತೆ ತಿಳಿಸಿದಾಗ, ಶಶಾಂಕ್‌ರವರು ಬಿಲ್ ತೆಗೆಯುವಷ್ಠರಲ್ಲಿ ಹಣವನ್ನು ಪಾವತಿಸದೇ ಇದ್ದು ಆಪಾದಿತರು ಕಾರು ನಂಬ್ರ KA-14-MB-8452 ನೇಯದಕ್ಕೆ ಡೀಸೆಲ್ ತುಂಬಿಸಿ QR Code ಸ್ಕ್ಯಾನ್ ಮಾಡಿ, ಬಿಲ್ ನೀಡುವಂತೆ ಹೇಳಿ ಹಣ ನೀಡುವುದಾಗಿ ನಂಬಿಸಿ ಹಣವನ್ನು ನೀಡದೇ ವಂಚನೆ ಮಾಡಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆಶಿಶ್ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದೆ.
