ರಾಮಮಂದಿರದ ಹಣ ಲೆಕ್ಕವಿಲ್ಲದಷ್ಟು ಲೂಟಿ ಇದರ ಮುಖ್ಯ ಕಾರಣ ಯಾರು? ರಾಮ ಮಂದಿರ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಅಥವಾ ರಾಮಮಂದಿರದ ಸಮಿತಿಯ ಸೃಷ್ಟಿ ಗಳು ಎಂಬುದು ಕೂಡಲೇ ಸಾಬೀತಾಗಬೇಕಿದೆ ಎಂದು
ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ ಮಾಡಿದ್ದಾರೆ.
ರಾಮಮಂದಿರದಲ್ಲಿ ಬಂದ ದೇಣಿಗೆ ಲೂಟಿ ಮಾಡಿದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಅಲ್ಲಿಯ ರಾಜ್ಯ ಸರ್ಕಾರಗಳು ಕೂಡಲೇ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಮುಖಾಂತರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಾಗಿದೆ.
ಸನಾತನ ಧರ್ಮದ ಬಗ್ಗೆ ಎಲ್ಲಾ ಹಿಂದುಗಳಿಗೂ ಗೌರವ ಇದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮಗೆ ಎಚ್ಚರಿಕೆ ಕೊಡುವ ಅಗತ್ಯ ಇಲ್ಲ. ತನಿಖೆಯಲ್ಲಿ ಸಮನಾಗಿ ಆಗುವಂತೆ ಅವರು ಕಾರ್ಯನಿರ್ವಹಿಸಲಿ.
ಅದನ್ನು ಬಿಟ್ಟು ಕೋಟ್ಯಾಂತರ ಹಣ ಹಾಗೂ ಬಂದ ದೇಣಿಗೆ ಲೆಕ್ಕಾಚಾರ ನೀಡದೆ .ಅದನ್ನು ದುರುಪಯೋಗ ಪಡಿಸಿದ್ದು ಖಂಡಿತವಾಗಿಯೂ ತಪ್ಪೇ. ರಾಮ ಮಂದಿರದ ಮುಖ್ಯಸ್ಥರಲ್ಲಿ ಓರ್ವರಾದ ಉಡುಪಿಯ ಪೇಜಾವರ ಮಠದ ಕಿರಿಯ ಸ್ವಾಮೀಜಿಗಳು ಈ ಬಗ್ಗೆ ಏನೋ ಒಂದು ಹೇಳುತ್ತಿದ್ದಾರೆ. ದಯವಿಟ್ಟು ಅವರು ಈ ವಿಚಾರದ ಬಗ್ಗೆ ಅವ್ಯವಹಾರದ ಬಗ್ಗೆ ಸಮಗ್ರವಾಗಿ ತಿಳಿದು ಮಾತನಾಡಬೇಕಿದೆ .ಅದನ್ನು ಬಿಟ್ಟು ಎಲ್ಲವೂ ಸರಿ ಇದೆ ಎಂಬುದನ್ನು ಮತ್ತು ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರಕಾರಕ್ಕೆ ಅವರ ಪ್ರಶಂಸೆಯ ಅಗತ್ಯ ಇಲ್ಲಿ ಇದೆಯಾ?
ನಾವು ಕೂಡ ಹಿಂದುಗಳಾಗಿ ಮನೆ ಮನೆಗೆ ಬಂದಾಗ ದೇಣಿಗೆಯನ್ನು ನೀಡಿರುತ್ತೇವೆ .ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ.
ದೇವಸ್ಥಾನಕ್ಕೆ ಯಾರು ಎಷ್ಟು ಹಣ ಕೊಟ್ಟರು ಅದು ದೇವರಿಗೆ ವಿನಿಯೋಗ ವಾಗಬೇಕು . ಅದು ಬಿಟ್ಟು
ನಾವು ಕೊಟ್ಟ ಹಣ ಈ ರೀತಿ ಲೂಟಿಯಾದರೆ ನಮ್ಮ ದೇವರ ಭಕ್ತಿಗೆ ಮೋಸವಾಗುತ್ತಿದೆ. ಎಂಬುದನ್ನು ಕೂಡ ನಮ್ಮ ಮಠಾಧೀಶರು ತಿಳಿದುಕೊಳ್ಳಬೇಕಾಗಿದೆ.
ಮಾತೆತ್ತಿದರೆ ಬಿಜೆಪಿಯನ್ನು ಬೆಂಬಲಿಸುವ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ನಮ್ಮಈ ಮಠಾಧೀಶರು ಕೂಡ ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
