ಬೆಂಗಳೂರು: ದಿನಾಂಕ:25-06-2026(ಹಾಯ್ ಉಡುಪಿ ನ್ಯೂಸ್) 25 ಜೂನ್ 1975 – ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವಾಗಿರುವ ತುರ್ತುಪರಿಸ್ಥಿತಿ ಹೇರಿದ ದಿನ. ತಮ್ಮ ಸ್ವಾರ್ಥ ಅಧಿಕಾರದ ಹಪಾಹಪಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಬಗೆದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಇಂದು ಹೇಳಿದ್ದಾರೆ..
ಒಂದು ಕೋಟಿಗೂ ಅಧಿಕ ಜನರ ಮೇಲೆ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ, ಲಕ್ಷಕ್ಕೂ ಹೆಚ್ಚು ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹರಣದಂತಹ ಭಯಾನಕ ದೌರ್ಜನ್ಯಗಳನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ದೇಶದ ಜನತೆ ಈ ಪ್ರಮಾದವನ್ನು ಎಂದಿಗೂ ಕ್ಷಮಿಸುವುದಿಲ್ಲ.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ ಎಲ್ಲ ಮಹನೀಯರ ಧೈರ್ಯ, ತ್ಯಾಗ ಮತ್ತು ಬಲಿದಾನಗಳಿಗೆ ಗೌರವಪೂರ್ವಕ ಪ್ರಣಾಮಗಳು ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
