ಕೆ.ಆರ್.ಪೇಟೆ: ದಿನಾಂಕ :23-06-2026(ಹಾಯ್ ಉಡುಪಿ ನ್ಯೂಸ್) ಕೆ.ಆರ್ .ಪೇಟೆ ವಿಧಾನಸಭಾ ಕ್ಷೇತ್ರದ ಪುರಸಭೆ ಆವರಣದಲ್ಲಿ ಜರುಗಿದ HTM ಸಂಭ್ರಮಾಚರಣೆ ಹಾಗೂ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶವನ್ನು ಕೆ.ಆರ್.ಪೇಟೆ ಶಾಸಕರಾದ ಶ್ರೀ ಹೆಚ್.ಟಿ. ಮಂಜು ಅವರೊಂದಿಗೆ ಶ್ರೀ ನಿಖಿಲ್ ಕುಮಾರ ಸ್ವಾಮಿ ಅವರು ಉದ್ಘಾಟಿಸಿದರು.
ಕೆ.ಆರ್ . ಪೇಟೆ ಶಾಸಕರಾದ ಶ್ರೀ ಹೆಚ್.ಟಿ. ಮಂಜು ಅವರ
ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಪಿಯುಸಿ ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜನಪರ ಕಾಳಜಿಯ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ನಿಖಿಲ್ ಕುಮಾರ್ ಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸಿ.ಎನ್. ಬಾಲಕೃಷ್ಣ , ಶ್ರೀ ಜಿ.ಡಿ ಹರೀಶ್ ಗೌಡ , ಶ್ರೀ ಸ್ವರೂಪ್ ಪ್ರಕಾಶ್ , ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ , ಮುಖಂಡರಾದ ಶ್ರೀ ರಾಮಚಂದ್ರು , ಜಿಲ್ಲಾಧ್ಯಕ್ಷರಾದ ಶ್ರೀ ರಮೇಶ್ , ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ , ಮಹಿಳಾ ಮುಖಂಡರಾದ ಶ್ರೀಮತಿ ರೇಖಾ , ಶ್ರೀ ಮುನೇಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ತಾಲ್ಲೂಕಿನ ಪ್ರಮುಖ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

