ಬೆಂಗಳೂರು: ದಿನಾಂಕ:22-06-2026(ಹಾಯ್ ಉಡುಪಿ ನ್ಯೂಸ್) ಬಿಡದಿ ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯವರು ಮಾಡುತ್ತಿರುವ ಆರೋಪಗಳಿಗೆ ಪ್ರತಿಯಾಗಿ ನೇರ ಚರ್ಚೆಗೆ ತಾನು ಸಿದ್ಧನಿದ್ದೇನೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಬಿಡದಿ ಟೌನ್’ಶಿಪ್ ಯೋಜನೆಗೆ ಸಂಬಂಧಿಸಿದಂತೆ
ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.
ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ
ಚರ್ಚಿಸಲು ನಾನು ಸಿದ್ಧನಿದ್ದು, ದಿನಾಂಕ 26-06-2026, ಬೆಳಗ್ಗೆ 11 ಗಂಟೆಗೆ ತಮ್ಮ ಐವರು ಪ್ರತಿನಿಧಿಗಳೊಂದಿಗೆ ವಿಧಾನಸೌಧದ ನನ್ನ ಕಚೇರಿಗೆ ಆಗಮಿಸುವಂತೆ ಪತ್ರದ ಮೂಲಕ ಅಧಿಕೃತ ಆಹ್ವಾನ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಶ್ರೀ ಕುಮಾರಸ್ವಾಮಿ ಅವರೇ ಆರಂಭಿಸಿದ ಬಿಡದಿ ಟೌನ್’ಶಿಪ್ ಯೋಜನೆ ಕುರಿತು ಎಲ್ಲಾ ದಾಖಲೆಗಳು, ಸರ್ಕಾರದ ನಿರ್ಣಯಗಳು ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ, ಬನ್ನಿ… ಎಂದು ಮುಖ್ಯಮಂತ್ರಿ ಪತ್ರದ ಮೂಲಕ ಅಧಿಕೃತವಾಗಿ ಆಹ್ವಾನಿಸಿದ್ದಾರೆ.

