ಮಣಿಪಾಲ:ಮೇ ೨೬(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೂರಾಡುತ್ತಿದ್ದ ಯುವಕರನ್ನು ಬಂಧಿಸಿದ ಘಟನೆ ನಡೆದಿದೆ.
ದಿನಾಂಕ ೨೫-೦೫-೨೦೨೨ ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ್ ವಂದಲಿಯವರು ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿರುವಾಗ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನ ನಗರದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರಾದ ಸಚಿನ್ ಯಮುನಪ್ಪ ಹಾಲನ್ನವರ್ (೨೦) ಇದೀಗ ಕೊಳಲಗಿರಿ ಚರ್ಚ್ ಬಳಿ, ಉಪ್ಪೂರು ಗ್ರಾಮ ದಲ್ಲಿ ನೆಲೆಸಿದ್ದು , ಈತನ ಖಾಯಂ ವಿಳಾಸ ಗುಳೇದಗುಡ್ಡ, ಬಾದಾಮಿ, ಬಾಗಲಕೋಟೆ ಯಾಗಿದ್ದು; ಇನ್ನೋರ್ವ ಯುವಕ ಪ್ರೇಮನಾಥ್ ಯಾನೆ ರೇವು (೨೧) ಸುಭಾಷ್ ನಗರ,ಕುರ್ಕಾಲು, ಉಡುಪಿ ಇವರಿಬ್ಬರೂ ಅಮಲಿನಲ್ಲಿ ತೂರಾಡುತ್ತಿರುವುದು ಕಂಡು ಬಂದಿದ್ದು.ಅವರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನಗೊಂಡು ಅವರನ್ನು ವಿಚಾರಣೆ ನಡೆಸಿದಾಗ ಅವರು ಮಾತನಾಡಲು ತೊದಲುತ್ತಿದ್ದು ;ಅವರ ಬಾಯಿಯಿಂದ ಗಾಂಜಾ ದ ಘಾಟು ವಾಸನೆ ಬರುತ್ತಿದ್ದ ಕಾರಣ ಅವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನಿಕ್ಸ್ ವಿಭಾಗದ ವೈದ್ಯರ ಮುಂದೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಇವರೀರ್ವರೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದ್ಯರು ಧ್ರಡ ಪತ್ರ ನೀಡಿದ್ದು ಇವರೀರ್ವರ ಮೇಲೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.