images-9.jpeg
Spread the love

ಕುಂದಾಪುರ: ದಿನಾಂಕ 19/06/2026 (ಹಾಯ್ ಉಡುಪಿ ನ್ಯೂಸ್) ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದಲ್ಲಿಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ನಾಯ್ಕ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಸಹಾಯಕ ಪೊಲೀಸ್‌ ಉಪನಿರೀಕ್ಷಕರಾದ ಉಮೇಶ್‌ ನಾಯ್ಕ ರವರು ದಿನಾಂಕ 18-06-2026 ರಂದು ಠಾಣೆಯಲ್ಲಿರುವಾಗ ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ದಾಳಿ ನಡೆಸುವಂತೆ ಮೇಲಾಧಿಕಾರಿಗಳು ತಿಳಿಸಿದ ಮೇರೆಗೆ ಕೂಡಲೇ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಗುಡಿಬೆಟ್ಟು ಬಳಿ ಹಾಡಿಯ ಬಳಿ ತಲುಪಿ  ನೋಡಿದಾಗ ಕೆಲವು ವ್ಯಕ್ತಿಗಳು ಹಾಡಿ ಜಾಗದಲ್ಲಿ ಸೇರಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು 2 ಕೋಳಿ ಹುಂಜಗಳ ಕಾಲಿಗೆ ಬಾಳನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರೆದು ತಮ್ಮ ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ್ದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದಾಗ  ಪೊಲೀಸರು ದಾಳಿ ನಡೆಸಿದ್ದಾರೆ .

ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ 1) ನಾರಾಯಣ (48), ಮೊವಾಡಿ, ತ್ರಾಸಿ, ಕುಂದಾಪುರ, 2) ಪ್ರಶಾಂತ್‌ (43),ಅರ್ಕದ ಕಟ್ಟೆ ನಿಟ್ಟೂರು ಉಡುಪಿ, 3)ನವರಾಜ್‌ (51),ವಿಷ್ಣು ಮೂರ್ತಿ ನಗರ ನಿಟ್ಟೂರು ಉಡುಪಿ ಇವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡಿದ್ದು ಉಳಿದವರು ಹಾಡಿಯಲ್ಲಿ ಓಡಿ ತಪ್ಪಿಸಿಕೊಂಡಿರುತ್ತಾರೆ.

ಆಪಾದಿತರು ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ ಒಟ್ಟು ಹಣ 1,600/- ರೂಪಾಯಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿತರುಗಳು ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 87, 93 KP Act & ಕಲಂ:11(1) (d) ಪ್ರಾಣಿ ಹಿಂಸೆ ತಡೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿ‌ದೆ.

error: No Copying!