ಬೆಂಗಳೂರು: ದಿನಾಂಕ:18-06-2026 (ಹಾಯ್ ಉಡುಪಿ ನ್ಯೂಸ್) ಅನ್ನದಾತರ ಕಲ್ಯಾಣವೇ ನಾಡಿನ ಅಭಿವೃದ್ಧಿಗೆ ಮೂಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೆ ರೈತರಿಗೆ ಅಗತ್ಯ ನೆರವು ನೀಡಲು, ಸುತ್ತು ನಿಧಿಯಿಂದ ₹650 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿದ್ದು, ಈ ಮೂಲಕ ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
