images-11.jpeg
Spread the love

ಹಿರಿಯಡ್ಕ: ದಿನಾಂಕ :14-06-2026 (ಹಾಯ್ ಉಡುಪಿ ನ್ಯೂಸ್) ಶ್ಯಾಮಲಾ ಎಸ್.ಪಿ ಎಂಬವರು ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ) ಶ್ರೀ ಶಕ್ತಿ ಸಂಘದಲ್ಲಿ ಅಧ್ಯಕ್ಷರಾಗಿದ್ದು ಆರೋಪಿತ ಸುಗಂಧಿ ಅದೇ ಸಂಘದಲ್ಲಿ ಮುಖ್ಯ ಬರಹಗಾರರಾಗಿ ಕೆಲಸ ಮಾಡಿರುತ್ತಾರೆ.

ಸಂಘ ದಿನಾಂಕ 19/10/2020 ರಂದು ಅಸ್ಥಿತ್ವಕ್ಕೆ ಬಂದಿದ್ದು ಸೊಸೈಟಿ ಆಕ್ಟ್ ಪ್ರಕಾರ ನೋಂದಣಿ ಆಗಿರುತ್ತದೆ. ಒಕ್ಕೂಟದಲ್ಲಿ ಒಟ್ಟು 68 ಸ್ವಸಹಾಯ ಗುಂಪುಗಳು 632 ಸದಸ್ಯರು ಇದ್ದು ಬೇರೆ ಬೇರೆ ಕಾರ್ಯ ಕ್ರಮಗಳ ಅನುಷ್ಠಾನಕ್ಕಾಗಿ ಒಕ್ಕೂಟದ ಖಾತೆಗೆ ಸರಕಾರದಿಂದ ಇದುವರೆಗೆ 42,00,000/- ರೂಪಾಯಿ ಹಣ ಬಿಡುಗಡೆ ಆಗಿದ್ದು ಅದರಲ್ಲಿ ಜೀವನೋಪಾಯ ಚಟುವಟಿಕೆ ಪ್ರಾರಂಭಿಸಲು ಸಾಲದ ರೂಪದಲ್ಲಿ ಶೇಕಡಾ 9 ಬಡ್ಡಿಯೊಂದಿಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಸರಕಾರದ ನಿಯಮಾನುಸಾರ ಸಾಲ ವಿತರಿಸಬೇಕಾಗಿರುತ್ತದೆ. ಹಾಗೂ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಯವರ ಮುಖಾಂತರ ಬ್ಯಾಂಕ್ ಖಾತೆಯನ್ನು ನಿರ್ವಹಣೆ ಮಾಡಲಾಗುತ್ತದೆ. ದಾಖಲಾತಿ ನಿರ್ವಹಣೆ ಮುಖ್ಯ ಬರಹಗಾರರ ಜವಾಬ್ದಾರಿ ಆಗಿದೆ. ಆರೋಪಿತಳು 2023 ನೇ ಸಾಲಿನಿಂದ 2025 ಡಿಸೆಂಬರ್ ತಿಂಗಳ ನಡುವಿನ ಅವದಿಯಲ್ಲಿ ವಿವಿಧ ಶ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಸಾಲ ನೀಡಿದ್ದನ್ನು ಸದಸ್ಯರು ಮರು ಪಾವತಿಸಲು ಮಾಡಿದ ಹಣವನ್ನು ಸಂಘದ ಜಮಾ ಪುಸ್ತಕದಲ್ಲಿ ಸಂಬಂದಿಸಿದ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಲ್ಲದೆ ಕೆಲ ಸದಸ್ಯರ ಬೇಡಿಕೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿ ಅದ್ಯಕ್ಷರು ಕಾರ್ಯದರ್ಶಿಯವರ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಠಿಸಿ ಅವು ಅಸಲಿ ಅಂತ ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರಿಸಿಕೊಂಡು ಬೇಡಿಕೆ ಇದ್ದಷ್ಟು ಹಣವನ್ನು ಸದಸ್ಯರಿಗೆ ನೀಡಿ ಉಳಿದ ಹಣವನ್ನು ತನ್ನ ಸಂತಕ್ಕೆ ಬಳಿಸಿಕೊಂಡಿದಲ್ಲದೆ ಕಾರ್ಯಕಾರಿ ಸಮಿತಿಗೆ ತೋರಿಸಲೆಂದು ಪ್ರತ್ಯೇಕ ಪುಸ್ತಕವನ್ನು ಹಾಗೂ ವ್ಯವಹಾರಕ್ಕೆ ಪ್ರತ್ಯೇಕ ಪುಸ್ತಕ ನಿರ್ವಹಿಸುತ್ತಾ ವಿವಿಧ ಸಂಘಗಳಲ್ಲಿ ಒಟ್ಟು 23,00,000/- ರೂ ಹಣವನ್ನು ದುರುಪಯೋಗ ಮಾಡಿಕೊಂಡು ಸಂಘ ಮತ್ತು ಸದಸ್ಯರಿಗೆ ನಂಬಿಕೆ ದ್ರೋಹ ಬಗೆದು ಮೋಸ ವಂಚನೆ ಮಾಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ:316(4), 318, 336(3), 340(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!