IMG_20260615_005700.jpg
Spread the love

ಬೈಂದೂರು: ದಿನಾಂಕ:15-06-2026(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಂದೂರು ,ಕಿರಿಮಂಜೇಶ್ವರ ಗ್ರಾಮದ ನಿವಾಸಿ ರಕ್ಷಿತಾ ಕಂಚಿಕಾನ್ (29) ಎಂಬವರು ಆರೋಪಿ 1 ಕಿರಣ ಇವರನ್ನು ದಿನಾಂಕ 06/12/2024 ರಂದು ತಿರುಪತಿಯ ವ್ಯಾಸರಾಜ ಮಠದಲ್ಲಿ ಮದುವೆಯಾಗಿದ್ದು ಬಳಿಕ ಗಂಡನ ಮನೆಯಲ್ಲಿ ಇದ್ದು ನಂತರ ಗರ್ಭಿಣಿಯಾಗಿ ತಾಯಿ ಮನೆಯಾದ ಕಿರಿಮಂಜೇಶ್ವರದಲ್ಲಿ ಜನವರಿ 02-2025 ರಿಂದ 25 ಜುಲೈ 2025 ರ ಅವಧಿಯಲ್ಲಿ ವಾಸ ಮಾಡಿಕೊಂಡಿದ್ದು ಈ ಸಮಯದಲ್ಲಿ ಆರೋಪಿ 1ನೇ ಕಿರಣನು ರಕ್ಷಿತಾ ರ ಮನೆಗೆ ಬಂದು ಹೋಗುತ್ತಿದ್ದವನು ರಕ್ಷಿತಾ ರಿಗೆ ಸಂಸಾರಿಕ ವಿಚಾರದಲ್ಲಿ ಗರ್ಭಿಣಿಯೆಂದು ನೋಡದೇ ಕೆಲಸಕ್ಕೆ ಹೋಗು ಎಂದು ಹೇಳುತ್ತಾ ರಕ್ಷಿತಾ ರಿಗೆ ಕಿರುಕುಳ ನೀಡಿ ಕೈಯಿಂದ ಹೊಡೆಯುವುದು ಅವಾಚ್ಯವಾಗಿ ಬೈಯುವುದು ಮಾಡುತ್ತಿದ್ದು ನಂತರ ರಕ್ಷಿತಾ ರನ್ನು ಮಗುವಿನ ಜೊತೆಯಲ್ಲಿ ಆರೋಪಿತ ಕಿರಣನ  ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಸಂಸಾರಿಕ ವಿಚಾರದಲ್ಲಿ ಮನಸ್ಥಾಪ ಉಂಟಾಗಿದ್ದರಿಂದ ಪುನಃ ಮಗುವಿನೊಂದಿಗೆ ರಕ್ಷಿತಾ ರವರು ಮಂಗಳೂರು ದೇರೆಬೈಲು ನಲ್ಲಿ ಪ್ಲಾಟ್‌ ನಲ್ಲಿ ವಾಸಮಾಡಿಕೊಂಡಿದ್ದು ಆ ಸಮಯದಲ್ಲಿಯು ಕೂಡ ಆರೋಪಿ 1 ನೇ ಕಿರಣನು ರಕ್ಷಿತಾ ರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದು ಈ ಬಗ್ಗೆ ಆತನ ಮನೆಯವರಲ್ಲಿ ತಿಳಿಸಿದರು ಕೂಡ ಆತನ ತಂದೆ ತಾಯಿ ಮತ್ತು ತಂಗಿಯರಾದ ಆರೋಪಿ 2. ಪ್ರಭಾವತಿ 3. ವಿನಯ ಕುಮಾರ್‌ 4.ನಂದಿನಿ ಯವರು ಕೂಡ ಆರೋಪಿ 1 ನೇ ಯ ಕಿರಣನ  ಪರವಾಗಿ ಮಾತನಾಡಿ ರಕ್ಷಿತಾ ರಿಗೆ ಅವಾಚ್ಯವಾಗಿ ಬೈದು ನಿಂದಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಕ್ಷಿತಾ ರವರು ಇದು ಸಂಸಾರಿಕ ವಿಚಾರವಾಗಿರುವುದರಿಂದ ಈ ವರಗೆ ದೂರು ನೀಡದೇ ಈಗ ಆರೋಪಿಗಳು ರಕ್ಷಿತಾ ರವರು ಮತ್ತು ಮಗುವಿನ ಆರೈಕೆ ಬಗ್ಗೆ ನೋಡಿಕೊಳ್ಳದೇ ಇದ್ದುದರಿಂದ ಮತ್ತು ಕಿರುಕುಳವನ್ನು ನೀಡುತ್ತಿರುವುದರಿಂದ ಪೊಲೀಸರಿಗೆ ದೂರು ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 85 115(2) 352 351(2) r/w 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!