ಕುಂದಾಪುರ: ಮೇ೨೫(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡಿಸುತ್ತಿದ್ದವನನ್ನು ಬಂಧಿಸಿದ ಘಟನೆ ನಡೆದಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೋಲಿಸ್ ಉಪನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್ ರವರಿಗೆ ದಿನಾಂಕ 24/05/2022 ರಂದು 3:30 ಗಂಟೆ ಸಮಯಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ಜಂಕ್ಷನ್ ಬಳಿಯ ಆಟೋರಿಕ್ಷಾ ನಿಲ್ಧಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟವಾಡುತ್ತಿದ್ದ ಪ್ರವೀಣ ಮೊಗವೀರ (31 ) ದಾರನಾಯ್ಕನ ಮನೆ ಹಟ್ಟಿಕುದ್ರು, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಎಂಬವನನ್ನು ಸಿಬ್ಬಂಧಿಯವರ ಸಹಕಾರದಿಂದ ದಾಳಿ ನಡೆಸಿ ಬಂಧಿಸಿ ಆತನಿಂದ ಮಟ್ಕಾ ಜೂಜಾಟ ದಿಂದ ಸಂಗ್ರಹಿಸಿದ ನಗದು ರೂಪಾಯಿ 945/-, ಕೃತ್ಯಕ್ಕೆ ಉಪಯೋಗಿಸಿದ ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್-1 ಅನ್ನು ಸ್ವಾದೀನಕ್ಕೆ ತೆಗೆದುಕೊಂಡು ಆತನ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.