ಕುಂದಾಪುರ: ದಿನಾಂಕ:10-06-2026(ಹಾಯ್ ಉಡುಪಿ ನ್ಯೂಸ್) ಕೊರವಡಿ ನಿವಾಸಿ ಸುಚಿತ್ರಾ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ ವ್ಯಕ್ತಿ ಯೋರ್ವ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ಕುಂಭಾಶಿ ಗ್ರಾಮದ ಕೊರವಡಿ ನಿವಾಸಿ ಸುಚಿತ್ರಾ (29) ಎಂಬವರು ನೀಡಿರುವ ದೂರಿನಲ್ಲಿ ಸರ್ವೆ ನಂಬ್ರ 248/39 ರಲ್ಲಿ 0.20 ಎಕ್ರೆ ಸ್ಥಳವು ಸುಚಿತ್ರಾ ರವರ ತಾಯಿಯ ಪಟ್ಟಾ ಸ್ಥಳವಾಗಿರುತ್ತದೆ. ದಿನಾಂಕ 07/06/2026 ರಂದು ಆಪಾದಿತ ಕುಂಭಾಶಿ ಗ್ರಾಮದ ಉಮೇಶ್ (43) ಎಂಬಾತ ಸ್ಥಳದಲ್ಲಿ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸಿದ್ದು ಇದನ್ನು ಸುಚಿತ್ರಾ ಅವರು ವಿರೋಧ ಪಡಿಸಿದ ಕಾರಣಕ್ಕೆ ಆಪಾದಿತನು ದಿನಾಂಕ 08/06/2026 ರಂದು ಸುಚಿತ್ರಾ ರವರ ಮನೆಯ ಬಾಗಿಲನ್ನು ಜೋರಾಗಿ ಬಡಿದ ಕಾರಣ ಸುಚಿತ್ರಾ ರವರು ಯಾರೆಂದು ನೋಡಲು ಬಾಗಿಲನ್ನು ತೆಗೆದ ತಕ್ಷಣವೇ ಆರೋಪಿ ಏಕಾಏಕಿ ಮನೆ ಒಳಗೆ ಅಕ್ರಮ ಪ್ರವೇಶ ಮಾಡಿ ಸುಚಿತ್ರಾ ರನ್ನು ಹಾಗೂ ಅವರ ತಾಯಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಸುಚಿತ್ರಾ ರವರು ಪೋಲೀಸರಿಗೆ ದೂರು ನೀಡಿದ್ದಾರೆ.
ಸುಚಿತ್ರಾ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 329(4), 352, 351(2), 115(2), 74 BNS ರಂತೆ ಪ್ರಕರಣ ದಾಖಲಾಗಿದೆ.
