Spread the love

ಬ್ರಹ್ಮಾವರ: ಮೇ ೨೪(ಹಾಯ್ ಉಡುಪಿ ನ್ಯೂಸ್) ‌ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದವನನ್ನು ಸಾರ್ವಜನಿಕ ದೂರಿನ ಮೇರೆಗೆ ಬಂಧಿಸಿದ ಘಟನೆ ನಡೆದಿದೆ .

ಬ್ರಹ್ಮಾವರ ಪೊಲೀಸ್ ಠಾಣೆ, ಪೋಲಿಸ್ ಉಪನಿರೀಕ್ಷಕ (ತನಿಖೆ) ರಾದ ಮುಕ್ತಾಬಾಯಿ ಇವರಿಗೆ  ೨೩-೦೫-೨೨ರಂದು ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈನ ಶುಭಲಕ್ಷ್ಮಿ ಬಾರ್‌& ರೆಸ್ಟೋರೆಂಟ್‌ ಪಕ್ಕದ ಪಾನ್‌ ಬೀಡಾ ಶಾಪ್‌ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಬ್ರಹ್ಮಾವರ ತಾಲೂಕು ,ಬಿಲ್ಲಾಡಿ ಗ್ರಾಮದ , ಜಾನುವಾರು ಕಟ್ಟೆಯ ಚಂದ್ರ ಮರಕಾಲ (೪೯) ಎಂಬಾತ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂಪಾಯಿ 1050/- ,  ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!