images.jpeg
Spread the love

ಕಾಪು: ದಿನಾಂಕ:05-06-2026 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ನಾದಿನಿ ಚೂರಿಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪಿರ್ದೋಸ್ ಬಾನು ಎಂಬವರು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಡುಪಿ ಉದ್ಯಾವರ ನಿವಾಸಿ ಫಿರ್ದೋಸ್ ಬಾನು(44) ಎಂಬವರ ಮದುವೆ ದಿನಾಂಕ 25/06/2000 ರಂದು ಶ್ರೀ ಕೃಷ್ಣ ಕಲ್ಯಾಣ ಮಂಟಪ, ಸಂಕೋಲಿಗೆ, ಉಚ್ಚಿಲ ಬಿರಿ ಇಲ್ಲಿ ಇಸ್ಮಾಯಿಲ್ ಸಾಹೇಬ್‌ ರವರ ಮಗನಾದ ಮೊಹಮ್ಮದ್ ಆದಿಲ್‌ನೊಂದಿಗೆ ಮುಸ್ಲಿಂ ಸಂಪ್ರದಾಯದೊಂದಿಗೆ ನೆರೆವೇರಿರುತ್ತದೆ. ಮದುವೆಯಾದ ನಂತರ ಪಿರ್ದೋಸ್ ಬಾನು ರವರಿಗೆ 25 ವರ್ಷ ಪ್ರಾಯದ ಮೊಹಮ್ಮದ್ ಫಾಜಿಲ್ ಹಾಗೂ ಸುಮಾರು 22 ವರ್ಷ ಪ್ರಾಯದ ಮೊಹಮ್ಮದ್ ಪೈಜಲ್ ಎಂಬ ಗಂಡು ಮಕ್ಕಳಿರುತ್ತಾರೆ.

ಮದುವೆ ಸಮಯದಲ್ಲಿ ಪಿರ್ದೋಸ್ ಬಾನು ರವರ ಗಂಡ ವಿದೇಶದಲ್ಲಿ ಎ.ಸಿ. ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು, ಮದುವೆಯ ನಂತರ ಪಿರ್ದೋಸ್ ಬಾನು ತನ್ನ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಅವರ ಅತ್ತೆ ಶಹನಾಝ್ ಬೇಗಂ ಹಾಗೂ ಗಂಡನ ತಂಗಿ ಪೌಜಿಯಾ ಬೇಗಂ ಇವರು ಅದೇ ಮನೆಯಲ್ಲಿ ವಾಸವಾಗಿದ್ದು, ಮದುವೆಯ ಪ್ರಾರಂಭದ ದಿನಗಳಲ್ಲಿ ಅತ್ತೆ ಹಾಗೂ ನಾದಿನಿ ರವರು ಪಿರ್ದೋಸ್ ಬಾನು ಗೆ ಸಣ್ಣ ಸಣ್ಣ ಕಾರಣಗಳಿಗೂ ಹೊಡೆಯುತ್ತಿದ್ದರು. ಗಂಡ ತಾನು ದುಡಿದ ಹಣವೆಲ್ಲಾ ಆತನ ತಾಯಿ ಖಾತೆಗೆ ಹಾಕುತ್ತಿದ್ದು, ಪಿರ್ದೋಸ್ ಬಾನು ರಿಗೆ ಖರ್ಚಿಗೆ ಯಾವುದೇ ರೀತಿಯಲ್ಲಿ ಹಣ ಕೊಡುತ್ತಿರಲಿಲ್ಲ. ಪಿರ್ದೋಸ್ ಬಾನು ರ ಅತ್ತೆ ತೀರಿ ಹೋದ ನಂತರ ಮನೆಯ ಎಲ್ಲಾ ವ್ಯವಹಾರವನ್ನು ನಾದಿನಿ ಫೌಜಿಯಾ ಬೇಗಂರವರು ನೋಡಿಕೊಳ್ಳುತ್ತಿದ್ದು, ದಿನಾಂಕ 18/02/2026ರಂದು ಪಿರ್ದೋಸ್ ಬಾನು ರವರ ಜೊತೆ ಜಗಳ ತೆಗೆದು ಚೂರಿಯಲ್ಲಿ ತಿವಿದಿರುತ್ತಾಳೆ. ಇದರಿಂದಾಗಿ ಎಡ ಕೈಯ ಬೆರಳಿಗೆ ರಕ್ತ ಗಾಯವಾಗಿದ್ದು, ಪಿರ್ದೋಸ್ ಬಾನು ರಿಗೆ ಆಕೆಯ ಗಂಡ ಹಾಗೂ ನಾದಿನಿ ರವರು ಸೇರಿಕೊಂಡು ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ನೀಡಿ, ಮನೆಗೆ ಬೀಗ ಹಾಕಿ ಹೋಗಿರುತ್ತಾರೆ. ಆ ನಂತರದಲ್ಲೂ ಪಿರ್ದೋಸ್ ಬಾನು ರವರ ನಾದಿನಿ ಜಗಳ ಮಾಡಿದ್ದು ಅಲ್ಲದೆ ಪಿರ್ದೋಸ್ ಬಾನು ರ ಗಂಡ ಮೊಬೈಲನ್ನು ಕಸಿದುಕೊಂಡು ಅದರಲ್ಲಿರುವ ಎಲ್ಲಾ ಡೇಟಾವನ್ನು ಅಳಿಸಿ ಹಾಕಿರುತ್ತಾನೆ. ಆ ಬಗ್ಗೆ ಪಿರ್ದೋಸ್ ಬಾನು ರವರು ಪ್ರಶ್ನಿಸಿದಾಗ ಅವರುಗಳು ಪಿರ್ದೋಸ್ ಬಾನು ರವರಿಗೆ ಹೊಡೆದಿರುವುದಲ್ಲದೆ ಮನೆಬಿಟ್ಟು ಹೋಗಬೇಕೆಂದು ಬೆದರಿಕೆ ಸಹಾ ಹಾಕಿರುತ್ತಾರೆ.

ಅದಲ್ಲದೆ ಪಿರ್ದೋಸ್ ಬಾನು ರವರ ತಂದೆ ತಾಯಿಯವರು ಮದುವೆ ಸಮಯದಲ್ಲಿ ಹಾಕಿದ 40 ಪವನ್ ಚಿನ್ನವನ್ನು ಅವರ ಗಂಡ ಹಾಗೂ ಮನೆಯವರು ಮಾರಾಟ ಮಾಡಿ ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ. ಪಿರ್ದೋಸ್ ಬಾನು ರವರು ಮದುವೆಯಾದ ದಿನದಿಂದ ಮಾನಸಿಕ ಹಿಂಸೆ ನೀಡಿ, ದೈಹಿಕವಾಗಿ ಹಲ್ಲೆ ಮಾಡಿದ ಮತ್ತು ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ನೀಡಿ, ಜೀವ ಬೆದರಿಕೆ ಹಾಕಿದ ನನ್ನ ಗಂಡ ಮೊಹಮ್ಮದ್ ಆದಿಲ್ ಹಾಗೂ ನಾದಿನಿ ಪೌಜಿಯಾ ಬೇಗಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪಿರ್ದೋಸ್ ಬಾನು ರವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 85, 115(2), 118(1),127(2), 351(2) r/w 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!