images-30.jpeg
Spread the love

ಅಜೆಕಾರು: ದಿನಾಂಕ:05-06-2026(ಹಾಯ್ ಉಡುಪಿ ನ್ಯೂಸ್) ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ  ದೈಹಿಕ ಶಿಕ್ಷಕರ ಅಚಾತುರ್ಯ ದಿಂದಾಗಿ ನಾಲ್ವರು ಮಕ್ಕಳು ಬೆಂಕಿಯಿಂದ ಸುಟ್ಟ ಗಾಯಗಳಿಗೆ ಒಳಗಾದ ಘಟನೆ ನಡೆದಿದೆ.

ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಅಶೋಕ ನಗರ ನಿವಾಸಿ ನಿತ್ಯಾನಂದ ನಾಯಕ್‌ (45) ಎಂಬವರ ಮಗ ಸಂಸ್ಕೃತ್(12) ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 07 ನೇ ತರಗತಿ ಓದುತ್ತಿದ್ದು, ದಿನಾಂಕ 03/06/2026 ರಂದು ಶಾಲೆಯಲ್ಲಿರುವ ಸಮಯ 12:00 ಗಂಟೆಗೆ ಶಾಲಾ ದೈಹಿಕ ಶಿಕ್ಷಕರು ಕಂಪ್ಯೂಟರ್ ಕ್ಲಾಸ್ ಕ್ಲೀನಿಂಗ್ ಮಾಡಲು ಹೇಳಿದ್ದು ನಂತರ ಅಲ್ಲಿನ ಕಸವನ್ನು ಶಾಲೆಯ ಕಾಂಪೌಂಡ್ ನಲ್ಲಿ ಒಂದು ಕಡೆ ಹಾಕಿ ಕಸಕ್ಕೆ ಬೆಂಕಿ ಹಾಕಿ ಸುಡಲು ಹೇಳಿದಂತೆ ನನ್ನ ಮಗ ಸಂಸ್ಕೃತ್ (12) ಅವನ ಜೊತೆಗಿದ್ದ ಗಗನ್ (12) ಹೃತ್ವಿಕ್(12) ಹಾಗೂ ಶಾಲಾ ಶಿಕ್ಷಕಿ ಅರುಣಾಕ್ಷಿ ಅವರ ಸಂಬಂದಿ ಅದ್ವಿನ್(11) (ಅಮೃತ ಬಾರತಿ ಶಾಲೆಯ 06 ನೇ ತರಗತಿ ವಿದ್ಯಾರ್ಥಿ) ರವರಿಗೆ ಕಸದಲ್ಲಿದ್ದ ಯಾವುದೋ ಒಂದು ಡಬ್ಬದಂತಹ ವಸ್ತು ಸ್ಪೋಟಗೊಂಡು ಈ ನಾಲ್ಕೂ ಮಕ್ಕಳಿಗೆ ಸುಟ್ಟ ಗಾಯಗಳಾಗಿರುತ್ತವೆ. ಆದುದರಿಂದ ನಿರ್ಲಕ್ಷತನದಿಂದ ಶಾಲೆಯ ಮಕ್ಕಳಿಗೆ ಕಸಕ್ಕೆ ಬೆಂಕಿ ಹಾಕಲು ಹೇಳಿ ಸೂಕ್ತ ಮುಂಜಾಗ್ರತೆ ವಹಿಸದೇ ಈ ಕೃತ್ಯಕ್ಕೆ ಕಾರಣವಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಕಲಂ: 287 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!