images-26.jpeg
Spread the love

ಮಣಿಪಾಲ: ದಿನಾಂಕ 03/06/2026(ಹಾಯ್ ಉಡುಪಿ ನ್ಯೂಸ್) ತಡ ರಾತ್ರಿ ವರೆಗೆ ಹೋಟೆಲ್ ವ್ಯವಹಾರ ನಡೆಸಿ ಸಾರ್ವಜನಿಕರ ನೆಮ್ಮದಿ ಕೆಡಿಸಿದ್ದ ಮಣಿಪಾಲದ SPICE N ICE ಹೋಟೆಲ್ ಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಂ ಇ ಅವರು ಬೀಗ ಜಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಂ ಇ, ಅವರು ದಿನಾಂಕ :01-06-2026 ರಂದು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಕಡೆ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಮುಂಜಾನೆ 02:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಡಿಸಿ ಕಛೇರಿ ರಸ್ತೆಯಲ್ಲಿರುವ SPICE N ICE ಹೋಟೆಲ್‌ ನವರು ಅವಧಿ ಮೀರಿ ಹೋಟೆಲ್‌ ನಲ್ಲಿ ಗಿರಾಕಿಗಳಿಗೆ ಸರ್ವಿಸ್‌ ಮತ್ತು ಪಾರ್ಸೆಲ್‌ ನೀಡುತ್ತಿದ್ದು ಇದರಿಂದ ಉಡುಪಿಯ ವಿವಿಧ ಪರಿಸರದಿಂದ ಸಾರ್ವಜನಿಕರು ಇಲ್ಲಿ ಬಂದು ಈ ಸ್ಥಳದಲ್ಲಿ ಜಮಾಯಿಸುವುದರಿಂದ ಅಲ್ಲಿಯ ಪರಿಸರದಲ್ಲಿ ವಾಸವಿರುವ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬುವುದಾಗಿ ಮಾಹಿತಿ ಬಂದ ಮೇರೆಗೆ ಹೋಟೇಲ್ ಗೆ ಹೋಗಿ, ವಿಡಿಯೋ ಮಾಡಿ, ಹೋಟೇಲನ್ನು ಮುಚ್ಚಿಸಿದ್ದಾರೆ .

ಹೋಟೇಲ್ ನ ವ್ಯವಸ್ಥಾಪಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದ್ದರೂ ಸಹ ಹೋಟೇಲ್ ವ್ಯವಸ್ಥಾಪಕರು ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಹೋಟೇಲನ್ನು ಕಾರ್ಯಾಚರಣೆ ಮಾಡಿರುವುದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿ, ಸಾರ್ವಜನಿಕ ಉಪದ್ರವಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 292 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!