20260530_235202.jpg
Spread the love

ಬೆಂಗಳೂರು: ದಿನಾಂಕ:30-05-2026(ಹಾಯ್ ಉಡುಪಿ ನ್ಯೂಸ್) ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಪ್ರಿಯಾಂಕ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ.

ತಮಗೆ ಹೆಗಲಿಗೆ ಹಾಕಿದ ಹೊಣೆಯನ್ನು, ತಮಗೆ ದಕ್ಕಿದ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುವ ಮತ್ತು ಪ್ರಾಮಾಣಿಕವಾದ ಮತ್ತು ಪೂರ್ಣ ಪ್ರಮಾಣದ ಶ್ರಮವನ್ನು ಹಾಕುವ ಮತ್ತು ಸಂಘಟನಾ ಚಾತುರ್ಯದ ಗುಣಗಳಿಂದ ಶ್ರೀ ಡಿ. ಕೆ ಶಿವಕುಮಾರ್ ಅವರು ಹೆಸರಾದವರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದ ಅವರ ಕಾರ್ಯವೈಖರಿಗೆ 2023ರ ಫಲಿತಾಂಶ ಒಂದು ಉತ್ತಮ ಉದಾಹರಣೆ, ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಜನಪರ ಚಿಂತನೆಗಳೊಂದಿಗೆ ಸಾಮಾಜಿಕ ನ್ಯಾಯ ಮತ್ತು ನೈತಿಕ ರಾಜಕಾರಣದ ಉದಾತ್ತ ಮಾರ್ಗದಲ್ಲಿ ನಡೆದ ಶ್ರೀ ಸಿದ್ದರಾಮಯ್ಯನವರ ಹೆಜ್ಜೆಗುರುತುಗಳಲ್ಲಿ ಸಾಗುವ ಮೂಲಕ ಜನಸಾಮಾನ್ಯರ ನೋವು ನಲಿವುಗಳನ್ನು ಹೃದಯದಿಂದ ಆಲಿಸುವ ಮತ್ತು ನೋಡುವ ಮಾತೃಹೃದಯದ ಆಡಳಿತವನ್ನು ನೀಡುವ ಶಕ್ತಿ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಸಿಗಲಿ ಎಂದು ಆಶಿಸುತ್ತೇನೆ.

error: No Copying!