ಬೈಂದೂರು: ದಿನಾಂಕ:30-05-2026 (ಹಾಯ್ ಉಡುಪಿ ನ್ಯೂಸ್) ಉಪ್ಪುಂದ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ವಾಟ್ಸಪ್ ನಲ್ಲಿ ಜೂಜು ನಡೆಸುತ್ತಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುನಿಲ್ ಕುಮಾರ್ ಬಿಎನ್ ಅವರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುನಿಲ್ ಕುಮಾರ್ ಬಿಎನ್ ಅವರಿಗೆ ದಿನಾಂಕ 29/05/2026 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಪರಿಚಯ ಹೊಟೇಲ್ ನ ದಕ್ಷಿಣ ಬದಿಯ ಗ್ಯಾರೇಜ್ ಪಕ್ಕದ ಸಾರ್ವಜನಿಕ ಜಾಗದಲ್ಲಿ ಕುಳಿತು ವಾಟ್ಸಪ್ ಗ್ರೂಪ್ ನಲ್ಲಿ ಕೋಳಿ ಮೇಲೆ ಟೋಕನ್ ನೀಡಿ ಜೂಜು ನಡೆಸುತ್ತಾರೆ ಎಂಬ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ಮಾಡಿದ್ದಾರೆ .
ದಾಳಿ ನಡೆಸಿದಾಗ ಸ್ಥಳದಲ್ಲಿ ವಾಟ್ಸಪ್ ಗ್ರೂಪ್ ನಲ್ಲಿ ಕೋಳಿ ಮೇಲೆ ಟೋಕನ್ ನೀಡಿ ಜೂಜು ಆಟ ನಡೆಸುತ್ತಿದ್ದ ಆಪಾದಿತ ಸಚಿನ್, ಉಪ್ಪುಂದ ಗ್ರಾಮ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಆತನ ವಶದಲ್ಲಿದ್ದ ವಾಟ್ಸಪ್ ಗ್ರೂಪ್ ನಲ್ಲಿ ಕೋಳಿ ಮೇಲೆ ಟೋಕನ್ ನೀಡಿ ಜೂಜು ಆಟಕ್ಕೆ ಬಳಸಿದ್ದ VIVO V 20 ಮೊಬೈಲ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.
