ಬೈಂದೂರು: ದಿನಾಂಕ:30-05-2026 (ಹಾಯ್ ಉಡುಪಿ ನ್ಯೂಸ್) ಹಳೆಯ ದ್ವೇಷದಿಂದ ಯುವಕರ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಬಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಿವರಾಜ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು ಗೋಳಿಹೊಳೆ ಗ್ರಾಮದ ನಿವಾಸಿ ಶಿವರಾಜ್ ಶೆಟ್ಟಿ (38), ಮತ್ತು ಆರೋಪಿ 1. ಪ್ರತಾಪ್ ಶೆಟ್ಟಿ ಇವರಿಗೆ ಒಂದು ವರ್ಷದ ಹಿಂದೆ ಕ್ರಿಕೆಟ್ ಆಟ ಆಡುವ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಶಿವರಾಜ್ ಶೆಟ್ಟಿ ರವರು ಆರೋಪಿ 1 ನೇಯ ಪ್ರತಾಪ್ ಶೆಟ್ಟಿ ನನ್ನು ದೂರವಿರಿಸಿದ್ದು ನಂತರದಲ್ಲಿ ಆರೋಪಿ 1 ನೇಯವನು ಶಿವರಾಜ್ ಶೆಟ್ಟಿ ರವರ ಕುರಿತು ಹಗುರವಾಗಿ ಮಾತಾಡಿ ಬೆದರಿಕೆ ಹಾಕುತ್ತಿದ್ದವನು ದಿನಾಂಕ 27/05/2026 ರಂದು ರಾತ್ರಿ 11:15 ಗಂಟೆಗೆ ಆರೋಪಿ 1 ನೇ ಯವ ಪ್ರತಾಪ್ ಶೆಟ್ಟಿ ನು ತನ್ನ ಸಹಚರರಾದ 2.ರಾಜು ,3. ವಿಷ್ನೇಶ್ ಗಾಣಿಗ,4. ಪ್ರಸಾದ್ ಆಚಾರಿ ಹಾಗೂ ಇತರರನ್ನು ಜತೆಯಲ್ಲಿ ಕರೆದುಕೊಂಡು ಶಿವರಾಜ್ ಶೆಟ್ಟಿ ರವರಿಗೆ ಹಲ್ಲೆ ಮಾಡುವ ಉದ್ದೇಶದಿಂದ ಕಾರು ಮತ್ತು ಮೋಟಾರ್ ಸೈಕಲ್‌ನಲ್ಲಿ ಶಿವರಾಜ್ ಶೆಟ್ಟಿ ರವರ ಮನೆಯ ಕಂಪೌಂಡಿನೊಳಗೆ ಅತಿಕ್ರಮ ಪ್ರವೇಶ ಮಾಡಿ ಕೈಯಲ್ಲಿ ಕಬ್ಬಿಣದ ರಾಡ್ ಮತ್ತು ಇತರ ಆಯುಧಗಳನ್ನು ಹಿಡಿದುಕೊಂಡು . ಶಿವರಾಜ್ ಶೆಟ್ಟಿ ರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಿವರಾಜ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 329 (3), 352,351 (2), 3 (5) BNS ರಂತೆ ಪ್ರಕರಣ ದಾಖಲಾಗಿದೆ.
