gettyimages-pha184000048-612x612.jpg
Spread the love

ಉಡುಪಿ: ದಿನಾಂಕ:24-05-2026 (ಹಾಯ್ ಉಡುಪಿ ನ್ಯೂಸ್) ಕರಾವಳಿ ಬೈಪಾಸ್ ಬಳಿಯ ಬೇಕರಿ ಮಾಲಕರೋರ್ವರಿಗೆ ಇನ್ನೋರ್ವ ಬೇಕರಿ ಮಾಲಕ ಗಂಭೀರ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಉಡುಪಿ ಕಿದಿಯೂರು ಗ್ರಾಮದ ನಿವಾಸಿ ಮುರಳೀಧರ (35) ಎಂಬವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿಯಿರುವ ಸಾಗರ್ ಗಂಗಾ ಕಟ್ಟಡದ ನೆಲ ಅಂತಸ್ತಿನಲ್ಲಿ ಪೂಜಾ ಬೇಕರಿ ಎಂಬ ಅಂಗಡಿಯನ್ನು ಕಳೆದ 20 ವರ್ಷಗಳಿಂದ ನಡೆಸಿಕೊಂಡಿರುತ್ತಾರೆ.

ಮುರಳೀಧರ ರ ಅಂಗಡಿಗೆ ತಾಗಿಕೊಂಡು ಅಶೋಕ ಎಂಬಾತನು ಸುಮಾರು ಒಂದು ವರ್ಷಗಳಿಂದ ಕೃಷ್ಣ ಬೇಕರಿ ಅಂಗಡಿಯನ್ನು ನಡೆಸಿಕೊಂಡಿರುತ್ತಾನೆ. ದಿನಾಂಕ 23/05/2026 ರಂದು ಅಪರಾಹ್ನ ಮುರಳೀಧರ ರು ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿರುವಾಗ ಅಶೋಕನು ಒಮ್ಮಲೇ ಮುರಳೀಧರ ರ ಬೇಕರಿ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಅಕ್ರಮವಾಗಿ ಅಂಗಡಿಯೊಳಗೆ ಬಂದು ಮುರಳೀಧರ ರ ಕಾಲರ್ ಪಟ್ಟಿ ಹಿಡಿದು ಕೆನ್ನೆಗೆ , ಕುತ್ತಿಗೆಗೆ ಕೈಯಿಂದ ಹಲ್ಲೆ ನಡೆಸಿದ್ದಲ್ಲದೇ, ಕಾಲಿನಿಂದ ತುಳಿದು ನೆಲಕ್ಕೆ ಬೀಳಿಸಿರುತ್ತಾನೆ. ಮುರಳೀಧರ ರು ಮೇಲೆ ಎದ್ದಾಗ ಅಶೋಕನು ಆತನ ಬಳಿಯಿದ್ದ ಚೂರಿಯಿಂದ ಎದೆಗೆ ಕುತ್ತಿಗೆಗೆ ಚುಚ್ಚಿರುತ್ತಾನೆ ಇದರಿಂದ ಒಳನೋವು ಉಂಟಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 115(2), 118(1),,329(4), 352, 351(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ .

error: No Copying!