images-14.jpeg
Spread the love

ಕುಂದಾಪುರ: ದಿನಾಂಕ:23-05-2026(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ನಡೆಸುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ್‌ ಎನ್‌ ಅವರು  ಕುಂದಾಪುರ ಠಾಣಾ ಸಿಬ್ಬಂಧಿಯವರೊಂದಿಗೆ ದಿನಾಂಕ:22-05-2026 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಕುಂದಾಪುರ ಕಸಬಾ ಗ್ರಾಮದ ಚರ್ಚ್ ರೋಡ್‌ ನಿಂದಾಗಿ ಕೋಡಿಗೆ ಸಂಪರ್ಕಿಸುವ ಸೇತುವೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸೇರಿ ನಿಂತುಕೊಂಡಿದ್ದು ಅವರೆಲ್ಲರೂ ಜೋರಾಗಿ ಬೊಬ್ಬೆ ಹಾಕುತ್ತಾ ಕೈಕೈ ಮಿಲಾಯಿಸಿ ಗಲಾಟೆ ಮಾಡುತ್ತಾ ಒಬ್ಬರಿಗೊಬ್ಬರೂ ದೂಡಾಡಿಕೊಳ್ಳುತ್ತಾ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವದನ್ನು ಕಂಡು ಪಿಎಸ್ಐ ರವರು  ಜೀಪ ನ್ನು ನಿಲ್ಲಿಸಿ ಸಿಬ್ಬಂದಿಯವರ ಸಹಕಾರದಿಂದ ಗಲಾಟೆ ಮಾಡುತಿದ್ದ ವ್ಯಕ್ತಿಗಳನ್ನು ಸುತ್ತುವರೆದಾಗ ಕೆಲವರು ಓಡಿ ಹೋಗಿದ್ದು ಉಳಿದವರನ್ನು ಹಿಡಿದು ವಿಚಾರಿಸಿದಾಗ ಅವರ ಹೆಸರು 1) ನವೀನ ಕಸಬಾ ಗ್ರಾಮ ಕುಂದಾಪುರ ತಾಲೂಕು 2) ಪ್ರಶಾಂತ ಕೋಡಿ ಕಸಬಾ ಗ್ರಾಮ 3) ವಿಘ್ನೇಶ್‌ ಹಂಗಳೂರು ಗ್ರಾಮ 4) ಗಣೇಶ್‌ ಕೋಡಿ ಕಸಬಾ ಗ್ರಾಮ ಇವರನ್ನು  ಬಂಧಿಸಿ ವಶಕ್ಕೆ ಪಡೆದಿದ್ದು ಓಡಿ ಹೋದವರ ಬಗ್ಗೆ ವಿಚಾರಿಸಿದಾಗ ಅವರ ಹೆಸರು ಹೋವಿನಟೆಬಲ್‌ ಮಹೇಶ್‌, ನಿಶಾಂತ ಹಾಗೂ ಇತರರು ಆಗಿರುತ್ತಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ  ಕಲಂ:194(2) BNS 2023 ರಂತೆ ಪ್ರಕರಣ ದಾಖಲಾಗಿದೆ.

error: No Copying!