images-12.jpeg
Spread the love

ಹೆಬ್ರಿ: ದಿನಾಂಕ: 23/05/2026 (ಹಾಯ್ ಉಡುಪಿ ನ್ಯೂಸ್) ಚಂದಾಲ್ ಕಟ್ಟೆ ಗೇರು ಪ್ಲಾಂಟೇಶನ್ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ರವಿ ಬಿ ಕೆ ಅವರು ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್ ಠಾಣೆಯ ಪಿಎಸ್ಐ ರವಿ ಬಿ ಕೆ  ರವರು ಸಿಬ್ಬಂದಿಯವರೊಂದಿಗೆ ದಿನಾಂಕ: 20-05-2026 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ನಾಲ್ಕೂರ ಬೀಟ್‌ ಸಿಬ್ಬಂದಿ ರವರು ಕರೆ ಮಾಡಿ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಚಂದಾಲ್‌ ಕಟ್ಟೆ ಗೇರು ಪ್ಲಾಂಟೇಷನ್‌ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದಂತೆ ರಾತ್ರಿ 20.30 ಗಂಟೆಗೆ ಸಿಬ್ಬಂದಿಯವರ ಮುಖೇನ ದಾಳಿ ಮಾಡಿದ್ದು ಅಲ್ಲಿದ್ದ ಜನರಲ್ಲಿ ಶೇಖರ ಪೂಜಾರಿ ಹಾಗೂ ಬಸವ ಕುಲಾಲ್‌ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದು ಕೆಲವರು ಓಡಿ ಹೋಗಿರುತ್ತಾರೆ.

ಜೂಜಾಟಕ್ಕೆ ಬಳಸಿದ ಅಂದಾಜು 2800-00 ಬೆಲೆಯ ನಾಲ್ಕು ಕೋಳಿ ಹುಂಜ , ಕೋಳಿ ಬಾಳು-3 ಹಾಗೂ ಕೈ ಚೀಲ – 4 ನಗದು 1000-00 ಹಾಗೂ ಟಾರ್ಚ್‌ -1ನ್ನು  ಸ್ವಾಧೀನಪಡಿಸಿದ್ದು , ಹಣವನ್ನು ಪಣವಾಗಿಟ್ಟು ಕೊಂಡು ಕೋಳಿಗಳಿಗೆ ಆಹಾರ ನೀರು ನೀಡದೆ ಹಿಂಸಾತ್ಮಕವಾದ ರೀತಿಯಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ  US 87,93 KP ACT & 11(1)(a) Prevention of cruelty animals act ರಂತೆ ಪ್ರಕರಣ ದಾಖಲಾಗಿದೆ.

error: No Copying!