IMG-20230923-WA0022.jpg
Spread the love

ಬೈಂದೂರು: ದಿನಾಂಕ:22-05-2026(ಹಾಯ್ ಉಡುಪಿ ನ್ಯೂಸ್) ಉಪ್ಪುಂದ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದ ಮಾಜಿ ಮತ್ತು ಹಾಲಿ ಅಧ್ಯಕ್ಷ ರು ಕಾನೂನಿಗೆ ವಿರುದ್ಧವಾಗಿ ಸಹಕಾರ ಸಂಘದ ಹಣವನ್ನು ಸೊಸೈಟಿ ಯೊಂದರಲ್ಲಿ ಠೇವಣಿ ಇರಿಸಿ ಸಂಘಕ್ಕೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರು ದಾಖಲಾಗಿದೆ.

ಮರವಂತೆ ನಿವಾಸಿ ದೀಪಕ್‌ ಕುಮಾರ್‌ (38) ಎಂಬವರು ಉಪ್ಪುಂದ ಕರಾವಳಿ ಸಾಂಪ್ರಾದಾಯಿಕ ಮೀನುಗಾರರ ಸಹಕಾರ ಸಂಘ ನಿ ಉಪ್ಪುಂದದಲ್ಲಿ ಜೊತೆ ಕಾರ್ಯದರ್ಶಿಯಾಗಿದ್ದು ಈ ಸೊಸೈಟಿಯಲ್ಲಿ 2018–19 ರಿಂದ 2022-23 ರಲ್ಲಿ ಈ ಸೊಸೈಟಿಯಲ್ಲಿ ಅಧ್ಯಕ್ಷರಾಗಿದ್ದ ಮೋಹನ ಚಂದ್ರ ಮತ್ತು ಈಗಿನ ಅಧ್ಯಕ್ಷ ನಾಗೇಶ್‌ ಖಾರ್ವಿಯವರು ಸಹಕಾರ ಕಾನೂನಿಗೆ ವಿರುದ್ದವಾಗಿ ಸುಮಾರು 1 ಕೋಟಿ ಹತ್ತು ಲಕ್ಷ ಹಣವನ್ನು ಕುಂದಾಪುರ ಸೌಹಾರ್ಧ ಸೊಸೈಟಿಯಲ್ಲಿ ಠೇವಣಿ ಇರಿಸಿದ್ದು ಈ ಸೌಹಾರ್ದ ಸೊಸೈಟಿ ಮೋಸ ಮಾಡಿ ಮುಚ್ಚಿದ್ದು ಇದರಿಂದ ದೀಪಕ್ ಕುಮಾರ್ ರವರು ಕಾರ್ಯದರ್ಶಿಯಾಗಿದ್ದ ಸೊಸೈಟಿಗೆ ನಷ್ಟವಾಗಿದ್ದು ಈ ಹಣದ ವಸೂಲಾತಿಗಾಗಿ ಸುಭಾಶ್ಚಂದ್ರ ರವರು ಮತ್ತು ದೀಪಕ್‌ಕುಮಾರ್‌ ರವರು ಈಗಿನ ಅಧ್ಯಕ್ಷ ನಾಗೇಶ್‌ ಖಾರ್ವಿಯವರಲ್ಲಿ ವಿಚಾರಿಸಿದ್ದು ನಂತರದಲ್ಲಿ ಈ ಸೋಸೈಟಿಯಲ್ಲಿ ನಾಗೇಶ್‌ ಖಾರ್ವಿ ಪರ ಪಂಗಡ ಮತ್ತು ಮೋಹನಚಂದ್ರ ಖಾರ್ವಿಯವರ ಪರ ಗುಂಪುಗಳಾಗಿದ್ದು ಈ ಸಮಯ ಸೊಸೈಟಿಯಲ್ಲಿ ಆಗಿರುವ ನಷ್ಟಕ್ಕೆ ಕಾರ್ಯದರ್ಶಿಯಾಗಿದ್ದ ದೀಪಕ್ ಕುಮಾರ್ ಮತ್ತು ಮ್ಯಾನೇಜರ್‌ ಸುಭಾಶ್ಚಂದ್ರ ರವರನ್ನು ಹೊಣೆಗಾರರನ್ನಾಗಿ ಮಾಡಿಸಿ ಈ ನಷ್ಟವನ್ನು ಭರಿಸುವ ಸಲುವಾಗಿ ದಿನಾಂಕ 26/12/2023 ರಂದು ಆರೋಪಿಗಳು ದೀಪಕ್ ಕುಮಾರ್ ರನ್ನು ಮತ್ತು ಕಾರ್ಯದರ್ಶಿ ಸುಭಾಸ್‌ಶ್ಚಂದ್ರ ರವರನ್ನು ಸೊಸೈಟಿಯ ಮೀಟಿಂಗ್‌ ಹಾಲ್‌ಗೆ ಬರಲು ಹೇಳಿ ನಿಮ್ಮಿಬ್ಬರ ನ್ನು ಕೆಲಸದಿಂದ ತೆಗೆದುಹಾಕುತ್ತೇವೆ ನೀವು ನಾವು ಹೇಳಿದ ಹಾಗೆ ಸ್ಟಾಂಪ್‌ ಪೇಪರ್‌ ನಲ್ಲಿ ಬರೆದು ಕೊಡಬೇಕು ಎಂದು ಹೇಳಿ ಒತ್ತಾಯಿಸಿ ಬೆದರಿಸಿ ಭಾರಿ ಮೊತ್ತದ ಹಣವನ್ನು ಮರುಪಾವತಿ ಮಾಡಲು ಬರೆಸಿಕೊಂಡಿರುವುದಾಗಿದೆ.

ಅಲ್ಲದೇ ದೀಪಕ್ ಕುಮಾರ್ ರವರಲ್ಲಿದ್ದ ಸಂಸ್ಥೆಗೆ ಸಂಬಂಧಿಸಿದ ಕೆಲವೊಂದು ಲೆಕ್ಕಚಾರಗಳ ಅಮೂಲ್ಯವಾದ ಡೈರಿ ಮತ್ತು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದಿಂದ ಬಂದಿರುವ ಖಾಸಗಿ ಪ್ರಕರಣದಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ  120(A) 415 342 415 464 463 467 499 506 415 120(B) 465 468 IPC ರಂತೆ ಪ್ರಕರಣ ದಾಖಲಾಗಿದೆ.

error: No Copying!