images-19.jpeg
Spread the love

ಉಡುಪಿ: ದಿನಾಂಕ 20/05/2026 (ಹಾಯ್ ಉಡುಪಿ ನ್ಯೂಸ್) ಪಂದುಬೆಟ್ಟು ವಿಲೆಜ್ ಇನ್ ಬಾರ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ್ ಕಂಕಣವಾಡಿ ಅವರು ದಿನಾಂಕ :20-05-2026 ರಂದು ಠಾಣೆಯಲ್ಲಿರುವಾಗ ಅಂಬಲಪಾಡಿ ಬೀಟ್‌ ಪೊಲೀಸ್‌ ರವರು ಫೋನ್‌ ಕರೆಮಾಡಿ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಪಂದುಬೆಟ್ಟು ವಿಲೇಜ್ ಇನ್‌ ಬಾರ್‌ ಹಿಂಭಾಗದ ಶೆಡ್‌ ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ವ್ಯಕ್ತಿಯೋರ್ವ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಭರತೇಶ ಕಂಕಣವಾಡಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಹೋಗಿ ದೂರದಲ್ಲಿ ನಿಂತು ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕರಿಂದ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿಯಲ್ಲಿ ನಂಬ್ರ ಬರೆದು ಕೊಡುತ್ತಿದ್ದ ವೇಳೆ ದಾಳಿ ನಡೆಸಿ  ಸ್ಥಳದಲ್ಲಿ ಮಟ್ಕಾ-ಜುಗಾರಿ ಆಟಕ್ಕೆ ಹಣ ಸಂಗ್ರಹಿಸಿ ಚೀಟಿ ಬರೆದು ಕೊಡುತ್ತಿದ್ದ ವ್ಯಕ್ತಿ ಶಿವಕುಮಾರ್ ಎನ್, (32) ಮಾರಿಕಾಂಬ ರಸ್ತೆ, ಕಾರ್ಗಿಲ್ , ಸಾಗರ, ಕರಗಾಳ, ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ಆತನಿಂದ ಆಟಕ್ಕೆ ಸಂಗ್ರಹಿಸಿದ ಒಟ್ಟು ನಗದು ಹಣ 820/- ರೂಪಾಯಿ, ಮಟ್ಕಾ ನಂಬ್ರ ಬರೆದ ಚೀಟಿ-1 ಮತ್ತು ಬಾಲ್‌ ಪೆನ್-1 ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 78(Ⅲ) KP act ರಂತೆ ಪ್ರಕರಣ ದಾಖಲಾಗಿದೆ.

error: No Copying!