IMG_20260519_134619.jpg
Spread the love

ಕುಂದಾಪುರ: ದಿನಾಂಕ:19-05-2026( ಹಾಯ್ ಉಡುಪಿ ನ್ಯೂಸ್) ಕುಂಭಾಶಿ ಯ ಕೊರವಡಿ ಎಂಬಲ್ಲಿ ಯುವಕನೋರ್ವ ನಿಗೆ 7 ಜನರ ತಂಡವೊಂದು ಸೋಡಾ ಬಾಟಲಿಯಿಂದ ಗಂಭೀರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕುಂದಾಪುರ ತೆಕ್ಕಟ್ಟೆ ಗ್ರಾಮದ ನಿವಾಸಿ ರಾಘವೇಂದ್ರ (29), ಎಂಬವರ ಸಹೋದರ ರಂಜಿತ ಎಂಬುವವರು ದಿನಾಂಕ 17/05/2026 ರಂದು ರಾತ್ರಿ  ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಮಳೆ ಬಂದಿದ್ದರಿಂದ ಕುಂಬಾಶಿಯ ಕೊರವಡಿ ಎಂಬಲ್ಲಿ ಶ್ರೀ ಸಿದ್ದಿ ಜನರಲ್‌ ಸ್ಟೋರ್‌ ಎದುರುಗಡೆ ಬೈಕನ್ನು ನಿಲ್ಲಿಸಿಕೊಂಡಿದ್ದಾಗ ಆಪಾದಿತರಾದ 1) ವಿಕಾಸ ಪೂಜಾರಿ, 2) ಶರತ್‌ ಪೂಜಾರಿ, 3) ಮಹೇಂದ್ರ ಪೂಜಾರಿ, 4) ಸುಕೇಶ್‌ ಪೂಜಾರಿ , 5) ಅಬಿಲಾಷ್‌ ಪೂಜಾರಿ, 6) ಮಂಜುನಾಥ, 7) ಸಂದೇಶ ಇವರು ಒಟ್ಟು ಸೇರಿ ರಾಘವೇಂದ್ರ ಅವರ ತಮ್ಮನನ್ನು ಕೊಲ್ಲುವ ಉದ್ದೇಶದಿಂದ ಸೋಡಾ ಬಾಟಲಿ ಹಾಗೂ ಹೆಲ್ಮೇಟ್‌ ನಿಂದ ಹಲ್ಲೆ ನಡೆಸಿದ ಪರಿಣಾಮ ತುಟಿ ಹಾಗೂ ದವಡೆಗೆ ರಕ್ತ ಗಾಯವಾಗಿದ್ದು ಈ ವಿಚಾರ ತಿಳಿದ ರಾಘವೇಂದ್ರ ರವರು ಸ್ಥಳಕ್ಕೆ ಬಂದು ತಮ್ಮನನ್ನು ಮನೆಗೆ ಕರೆದುಕೊಂಡು ಹೋಗಿದ್ದು ದಿನಾಂಕ 18/05/2026 ರಂದು ಬೆಳಿಗ್ಗೆ ರಾಘವೇಂದ್ರ ಅವರ ತಮ್ಮನು ಮನೆಯಲ್ಲಿದ್ದವನು ಏಳುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದಲ್ಲಿ ಪರೀಕ್ಷಿಸಿದ ವೈದ್ಯರು ಸ್ಕ್ಯಾನಿಂಗ್‌ ಆಗಿ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಿದಂತೆ ಬಳಿಕ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದಾರೆ.

ರಂಜಿತ್‌ ನಿಗು ಹಾಗೂ ಆಪಾದಿತರಿಗೂ ಇದ್ದ ಹಳೆಯ ದ್ವೇಶ ಈ ಘಟನೆಗೆ ಕಾರಣವಾಗಿದೆ ಎಂದು ರಾಘವೇಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಅಪರಾಧ ಕ್ರಮಾಂಕ 44/2026 ಕಲಂ:189(2),191(2), 191(3), 126(2), 109 352 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!