ಕಾಪು: ದಿನಾಂಕ: 18-05-2026(ಹಾಯ್ ಉಡುಪಿ ನ್ಯೂಸ್) ಉಡುಪಿ ಸೂಪರ್ ಬಜಾರ್ ನ ವಾಚ್ ಮನ್ ಓರ್ವರಿಗೆ ಅದೇ ಕಟ್ಟಡದ ಟೈಲರ್ ಓರ್ವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹೇರೂರು -52 ಗ್ರಾಮದ ಉಗ್ರಾಣಿಬೆಟ್ಟು ನಿವಾಸಿ ಶಂಕರ್ ಗಾಣಿಗ (58) ರವರು ಉಡುಪಿ ಸೂಪರ್ ಬಜಾರ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಬಿಲ್ಡಿಂಗ್ ನಲ್ಲಿ ಶಂಕರ್ ಗಾಣಿಗರವರ ಪರಿಚಯದ ಕೃಷ್ಣ ಗಾಣಿಗ ಎಂಬವರು ಆರ್.ಕೆ ಟೈಲರ್ ಎಂಬ ಅಂಗಡಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುತ್ತಾರೆ.
ಕೆಲಸದ ಸಂಧರ್ಭದಲ್ಲಿ ಕೃಷ್ಣ ಗಾಣಿಗ ರವರು ಶಂಕರ್ ಗಾಣಿಗ ರನ್ನು ಯಾವಾಗಲೂ ಗುರಾಯಿಸಿಕೊಂಡು ಹೋಗುವುದು, ಅವರನ್ನು ಉದ್ದೇಶಿಸಿ ನಿಂದಿಸುತ್ತಾ ಬಂದಿರುತ್ತಾನೆ. ಇತ್ತೀಚಿಗೆ ಸುಮಾರು 15 ದಿನಗಳ ಹಿಂದೆ ಶಂಕರ್ ಗಾಣಿಗರು ಕೆಲಸ ನಿರ್ವಹಿಸುತ್ತಿರುವ ಸಂಧರ್ಭದಲ್ಲಿ ಕೃಷ್ಣ ಗಾಣಿಗ ನು ಕುಡಿದು ಬಂದು ಮೈಗೆ ಕೈ-ಹಾಕಿ ದೂಡಿ ಹಲ್ಲೆ ಮಾಡಿರುತ್ತಾನೆ.
ದಿನಾಂಕ: 17-05-2026 ರಂದು ಸಂಜೆ ಉಡುಪಿಯ ಬಲಾಯಿಪಾದೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೃಷ್ಣ ಗಾಣಿಗ ಹಾಗೂ ಆತನ ಸ್ನೇಹಿತರಾದ ದಯಾನಂದ ಮತ್ತು ಅಣ್ಣೋಜಿ ರವರು ಶಂಕರ್ ಗಾಣಿಗರ ಮುಖಕ್ಕೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ಈ ವಿಚಾರವನ್ನು ಶಂಕರ ಗಾಣಿಗರು ತನ್ನ ಮಗ ಸೃಜನ್ ನಲ್ಲಿ ತಿಳಿಸಿದಾಗ ಆ ಬಗ್ಗೆ ರಾಜಿ ಮಾತುಕತೆ ನಡೆಸುವರೇ ಶಂಕರ್ ಗಾಣಿಗ ರು, ಸೃಜನ್ ಹಾಗೂ ತನ್ನ ಹೆಂಡತಿಯ ತಮ್ಮ ಸಂತೋಷ್ ರವರೊಂದಿಗೆ ಕೃಷ್ಣ ಗಾಣಿಗ ರವರ ಮನೆಗೆ ಹೋಗಿದ್ದು, ಆ ಸಮಯ ಸೃಜನ್ ಕೃಷ್ಣ ಗಾಣಿಗ ರವರಲ್ಲಿ ಯಾಕೆ ನೀವು ನನ್ನ ತಂದೆಗೆ ಹಲ್ಲೆ ಮಾಡಿದ್ದು ಎಂದು ಕೇಳಿದಾಗ ಕೃಷ್ಣ ಗಾಣಿಗ ಹಾಗೂ ಅವರ ಹೆಂಡತಿ ಏಕಾಏಕಿ ಕೈಯಲ್ಲಿ ಕತ್ತಿ ಮತ್ತು ಕೋಲು ಹಿಡಿದುಕೊಂಡು ಬಂದು ಶಂಕರ್ ಗಾಣಿಗರ ತಲೆಗೆ ಬಲವಾಗಿ ಕಡಿದಿರುತ್ತಾರೆ. ಸೃಜನ್ ರವರನ್ನು ಕೂಡಾ ಕೈಯಿಂದ ದೂಡಿ ತುಳಿದಿರುತ್ತಾರೆ. ಆ ಸಮಯ ಗಲಾಟೆ ಬಿಡಿಸಲು ಹೋದ ಸಂತೋಷ್ ರವರಿಗೆ ಕೂಡಾ ಹಲ್ಲೆ ಮಾಡಿ ನಿಂದಿಸಿರುತ್ತಾರೆ. ಅದೇ ಸಮಯ ಅಲ್ಲಿಗೆ ಬಂದ ದಯಾನಂದ ಹಾಗೂ ಅಣ್ಣೋಜಿ ರವರು ಕೃಷ್ಣ ಗಾಣಿಗ ಮತ್ತು ಅವರ ಹೆಂಡತಿಯೊಂದಿಗೆ ಸೇರಿಕೊಂಡು ಶಂಕರ್ ಗಾಣಿಗ ರಿಗೆ ಹಾಗೂ ಅವರ ಮಗ ಸೃಜನ್ ರವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ಬೈದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಶಂಕರ್ ಗಾಣಿಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 118(1),351. 352, ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
