ಮೈಸೂರು : ದಿನಾಂಕ:14-05-2026(ಹಾಯ್ ಉಡುಪಿ ನ್ಯೂಸ್) ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ನಗರದ ಹಲವೆಡೆಗಳಲ್ಲಿ ಇಂದು ಸಂಚರಿಸಿ, ವಿವಿಧ ಇಲಾಖೆಗಳಡಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.. ಇದರ ಭಾಗವಾಗಿ ಬನ್ನಿಮಂಟಪದ ಹತ್ತಿರ ನೂತನವಾಗಿ ನಿರ್ಮಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಿಸಿ, ಕಾಮಗಾರಿಯ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡು, ಕೆಲವು ಸೂಚನೆಗಳನ್ನು ನೀಡಿದರು.
