istockphoto-2232610278-612x612.jpg
Spread the love

ಮಣಿಪಾಲ: ದಿನಾಂಕ:  07/05/2026 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ರೂಸ್ಟರ್ ಹೋಟೆಲ್ ನವರು ತಡರಾತ್ರಿ ವರೆಗೂ ವ್ಯಾಪಾರ ನಡೆಸಿ ಸ್ಥಳೀಯ ನಿವಾಸಿಗಳಿಗೆ ಉಪದ್ರವ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ತಡರಾತ್ರಿ ದಾಳಿ ನಡೆಸಿ ಹೋಟೆಲ್ ಗೆ ಬೀಗ ಜಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ರವರು ದಿನಾಂಕ : 05-05-2026 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 06/05/2026 ರಂದು ಮುಂಜಾನೆ ಒಂದು ಗಂಟೆಗೆ ಶಿವಳ್ಳಿ ಗ್ರಾಮದ ವಿ ಎಸ್ ಆಚಾರ್ಯ ರಸ್ತೆಯಲ್ಲಿರುವ ಓಡಿಸ್ಸಿ ಕಟ್ಟಡದ ಬಳಿ ಇರುವ ರೂಸ್ಟರ್ ಹೋಟೇಲ್ ನವರು ಅವಧಿ ಮೀರಿ ಹೋಟೇಲ್ ನಲ್ಲಿ ಗಿರಾಕಿಗಳಿಗೆ ಪಾರ್ಸೆಲ್ ನೀಡುತ್ತಿರುವುದರಿಂದ ಉಡುಪಿಯ ವಿವಿಧ ಪರಿಸರದಿಂದ ಸಾರ್ವಜನಿಕರು ಅಲ್ಲಿ ಬಂದು ಆ ಸ್ಥಳದಲ್ಲಿ ಜಮಾಯಿಸುವುದರಿಂದ ಆ ಪರಿಸರದಲ್ಲಿರುವ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದಂತೆ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಹೋಟೇಲ್ ಗೆ ಹೋಗಿ ಹೋಟೇಲನ್ನು ಮುಚ್ಚಿಸಿದ್ದಾರೆ.

ಹೋಟೇಲ್ ನ ಮಾಲೀಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದರೂ ಸಹ ಹೋಟೇಲ್ ಮಾಲೀಕರು ಅವಧಿ ಮೀರಿ ಯಾವುದೇ ಪರವಾನಿಗೆ ಪಡೆಯದೇ ಹೋಟೇಲನ್ನು ಕಾರ್ಯಾಚರಣೆ ಮಾಡಿರುವುದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿ, ಸಾರ್ವಜನಿಕ ಉಪದ್ರವಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 292 BNS ರಂತೆ ಪ್ರಕರಣ ದಾಖಲಾಗಿದೆ .

error: No Copying!