ಹಿರಿಯಡ್ಕ: ದಿನಾಂಕ:06-05-2026(ಹಾಯ್ ಉಡುಪಿ ನ್ಯೂಸ್) ಪೆರ್ಡೂರು ಕಡೆಯಿಂದ ಹಿರಿಯಡ್ಕ ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿತರಾದ 1) ಸುಹಾಸ್(21),ಕುರ್ಕಲ್ ಉಡುಪಿ, 2) ಲವ ಶೆಟ್ಟಿ (64),ಭಾರತ ನಗರ ಕಾಪು ಎಂಬವರು ಪೆರ್ಡೂರು ಕಡೆಯಿಂದ ಹಿರಿಯಡಕ ಕಡೆಗೆ ವಾಹನ ಸಂಖ್ಯೆ KA-20-AB-9970 ರಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಅನಧೀಕೃತವಾಗಿ ವಾಹನ ಸಂಖ್ಯೆ KA-20-AB-9970 ಬೋಲೇರೊ ಟೆಂಪೋ ಗೂಡ್ಸ್ ವಾಹನದಲ್ಲಿ 4 ಜಾನುವಾರುಗಳನ್ನು ತುಂಬಿಕೊಂಡು ಅವುಗಳಿಗೆ ಆಹಾರ ನೀರು ನೀಡದೆ ಒಂದಕ್ಕೊಂದು ತಾಗಿ ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಕೊಂಡು ಕಸಾಯಿಖಾನೆಗೆ ಮಾಂಸ ಮಾಡುವ ದುರುದ್ದೇಶದಿಂದ ವಾಹನದಲ್ಲಿ ತುಂಬಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಕ್ಕಾಲು ಹೆಬ್ಬಾರು ಸೇತುವೆ ಹತ್ತಿರ ಚರಂಡಿಗೆ ಇಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ:281, 112 ಜೊತೆಗೆ 3(5) BNS ಮತ್ತು ಕಲಂ:4,5,7,12 ಕರ್ನಾಟಕ ಜಾನುವಾರು ಪ್ರತಿಬಂಧಕ ಕಾಯ್ದೆ ಮತ್ತು ಕಲಂ: 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು66 ಜೊತೆಗೆ 192 ಐ ಎಮ್ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
