ಮಣಿಪಾಲ: ಮೇ೧೮(ಹಾಯ್ ಉಡುಪಿ ನ್ಯೂಸ್) ತಂದೆಯ ಜಾಗ ನೋಡಲು ಬಂದವರಿಗೆ ವ್ಯಕ್ತಿ ಯೋರ್ವ ಹಲ್ಲೆ ನಡೆಸಿದ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ.
ಉಡುಪಿ , ಅಜ್ಜರಕಾಡು ಭಗತ್ಸಿಂಗ್ ಮಾರ್ಗದ ನಿವಾಸಿ ಪಿ ಎನ್ ರವೀಂದ್ರ ರಾವ್ (೫೬) ಹಾಗೂ ಅವರ ಸ್ನೇಹಿತ ಜಗದೀಶ ಶೆಟ್ಟಿಗಾರರವರು ರವೀಂದ್ರ ರಾವ್ ರವರ ತಂದೆಯ ಪೆರಂಪಳ್ಳಿಯ ಅಂಬಡೆಬೆಟ್ಟಿ ಎಂಬಲ್ಲಿನ ಜಾಗಕ್ಕೆ ದಿನಾಂಕ 17/05/2022 ರಂದು ಹೋಗಿದ್ದು ಸಂಜೆ 03:45 ಗಂಟೆಗೆ ಹೆರಾಲ್ಡ್ ಡಿಸೋಜಾ ಎಂಬಾತ ಒಂದು ಮರದ ಸೋಂಟೆ ಹಿಡಿದುಕೊಂಡು ರವೀಂದ್ರ ರಾವ್ ಇದ್ದಲ್ಲಿಗೆ ಬಂದು ಅವಾಚ್ಯವಾಗಿ ಬೈದು ಜಗದೀಶ್ ಶೆಟ್ಟಿಗಾರರವರಿಗೆ ಹೊಡೆದಿದ್ದು ತಡೆಯಲು ಹೋದ ರವೀಂದ್ರ ರಾವ್ ರವರಿಗೆ ಹಣೆಗೆ ಮೂಗಿಗೆ ಹಾಗೂ ಮೈ ಕೈಗೆ ಹೊಡೆದು ರಕ್ತ ಬರುವಂತೆ ಗಾಯಪಡಿಸಿರುತ್ತಾರೆ ಎಂದು ದೂರಲಾಗಿದೆ. ರವೀಂದ್ರ ರಾವ್ ರವರು ಚಿಕಿತ್ಸೆ ಬಗ್ಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಅಲ್ಲದೆ ಜಗದೀಶ ಶೆಟ್ಟಿಗಾರ ರವರನ್ನು ಹೆರಾಲ್ಡ್ ಡಿಸೋಜಾ ಹಾಗೂ ಇತರರು ಸೇರಿ ಹಿಡಿದುಕೊಂಡಿದ್ದರು ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.