images-14.jpeg
Spread the love

ಹಿರಿಯಡ್ಕ: ದಿನಾಂಕ:30-04-2026(ಹಾಯ್ ಉಡುಪಿ ನ್ಯೂಸ್) ಹೆರ್ಡೆ ಪಟ್ರ ಬೆಟ್ಟು ವಿನ  ಮನೆಯೊಂದರಲ್ಲಿ ಮಹಿಳೆಯೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿಠ್ಠಲ ಪಿ ಮಲವಡಕರ ಅವರು ದಾಳಿ ನಡೆಸಿ ಮಹಿಳೆ ಯನ್ನು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ವಿಠ್ಠಲ ಪಿ ಮಲವಡಕರ ಅವರು ದಿನಾಂಕ :29-04-2026 ರಂದು ಠಾಣೆಯಲ್ಲಿರುವ ಸಮಯ ಬಂದ ಸಾರ್ವಜನಿಕ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಹೆರ್ಡೆ ಪಟ್ರಬೆಟ್ಟು  ಶ್ರೀಮತಿ ಮಮತ ಎಂಬವರ ಮನೆಯ ಮುಂಭಾಗದ ಶೆಡ್‌ನ ಬಳಿ ದಾಳಿ ನಡೆಸಿದಾಗ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಸಾರಾಯಿ ತುಂಬಿದ ತುಂಡರಿಸಿದ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಸರಾಯಿ ಕುಡಿಯುತ್ತಿದ್ದು ಆತನ ಪಕ್ಕದಲ್ಲಿ ಓರ್ವ ಮಹಿಳೆ ನಿಂತುಕೊಂಡಿರುತ್ತಾಳೆ.

ನಂತರ ಪೊಲೀಸರು ಸ್ಥಳೀಯರೊಂದಿಗೆ ಶೆಡ್‌ ಪ್ರವೇಶಿಸಿದಾಗ 1)ORIGINAL CHOICE DELUX WHISKY 180 ML ಅಂತ ಬರೆದಿರುವ ಸರಾಯಿ ತುಂಬಿದ ಟೆಟ್ರಾ ಪ್ಯಾಕೇಟ್-‌2,  2) 1)ORIGINAL CHOICE DELUX WHISKY 180 ML ಅಂತ ಬರೆದಿರುವ ಖಾಲಿ ಟೆಟ್ರಾಪ್ಯಾಕ್‌ -1, 3) 1 ಲೀಟರ್‌ ನೀರಿನ ಖಾಲಿ ಪ್ಲಾಸ್ಟಿಕ್‌ ಬಾಟಲಿ -1 ಆಗಿರುತ್ತದೆ  .ಈ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿ ಕೊಂಡಿದ್ದಾರೆ.

ಆರೋಪಿತ ಮಹಿಳೆಯು ಯಾವುದೇ ಅನುಮತಿ ಇಲ್ಲದೆ ಮನೆಯ ಮುಂಭಾಗದ ಶೆಡ್ ನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅನುವು ಮಾಡಿ ಕೊಟ್ಟಿದ್ದಳು ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕಲಂ : 15(J),  32(3) ಕರ್ನಾಟಕ ಅಬಕಾರಿ ಕಾಯ್ದೆರಂತೆ ಪ್ರಕರಣ ದಾಖಲಾಗಿದೆ.  

error: No Copying!