ಗಂಗೊಳ್ಳಿ: ದಿನಾಂಕ 28/04/2026 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ಬಿ ಎನ್ ಅವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ಬಿ ಎನ್, ಅವರು ದಿನಾಂಕ :27-04-2026 ರಂದು ತ್ರಾಸಿ ಕಡೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿಯ ನಾಗಶ್ರೀ ಬಾರ್ ಪಕ್ಕ ವಿಶ್ವನಾಥ ಶೇರಿಗಾರ್ ಎಂಬವರಿಗೆ ಸಂಬಂದಿಸಿದ ಕಟ್ಟಡದ ಹೊರಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ.
ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ದಾಳಿ ಮಾಡಿ ಅಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಸುರೇಶ್ ಶೇರಿಗಾರ್ ಎಂಬವನನ್ನು ಬಂಧಿಸಿ ಆತನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟೂ 865/- ರೂಪಾಯಿ, ಮಟ್ಕಾ ಚೀಟಿ, ಬಾಲ್ ಪೆನ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆಪಾದಿತನಾದ ಸುರೇಶ್ ಶೇರುಗಾರ್ ನು ಗಂಗೊಳ್ಳಿಯ ಗಣೇಶ್ ಪೂಜಾರಿ ಎಂಬವನು ತಿಳಿಸಿದಂತೆ ಮಟ್ಕಾ ಜುಗಾರಿ ಮಾಡುತ್ತಿದ್ದು ಗಣೇಶ್ ಪೂಜಾರಿಯು ತನ್ನ ಸ್ವಂತ ಲಾಭಕ್ಕಾಗಿ ಸುರೇಶ್ ಶೇರುಗಾರ್ ಮುಖೇನ ಮಟ್ಕಾ ಜುಗಾರಿ ಆಡಿಸಿ ಆ ಮೂಲಕ ಹಣ ಸಂಗ್ರಹಿಸಿ ಇಬ್ಬರು ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 78(1) (111) KP ACT & 112 BNS ರಂತೆ ಪ್ರಕರಣ ದಾಖಲಾಗಿದೆ.
