Spread the love

ಉಡುಪಿ:ಮೇ ೧೭(ಹಾಯ್ ಉಡುಪಿ ನ್ಯೂಸ್) ೧೦ನೇ ತರಗತಿ ಯ ಪ‌ಠ್ಯಪುಸ್ತಕದಲ್ಲಿ ಬಿಲ್ಲವರ ಗುರು ಶ್ರೀ ನಾರಾಯಣ ಗುರು ಗಳ ಪಠ್ಯವನ್ನು ರಾಜ್ಯ ಸರಕಾರ ಕೈ ಬಿಟ್ಟಿರುವ ಬಗ್ಗೆ ಬಿಲ್ಲವ ಸಮಾಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಕೈ ಬಿಟ್ಟಿರುವ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪುಠ ಸಂಖ್ಯೆ 49ರಲ್ಲಿ ಇರುವ ಶ್ರೀ ನಾರಾಯಣ ಗುರುಗಳ ಬಗೆಗಿನ ಪಠ್ಯವನ್ನು ರಾಜ್ಯ ಬಿಜೆಪಿ ಸರ್ಕಾರ ಕೈ ಬಿಟ್ಟಿದ್ದು ಇದೊಂದು ವ್ಯವಸ್ಥಿತ ಹುನ್ನಾರ , ಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಲಾಗಿದೆ.

ಜಾತಿ ವ್ಯವಸ್ಥೆ, ಮೇಲ್ಜಾತಿ,ಕೀಳ್ಜಾತಿ ಎಂಬ ಅಸ್ಪ್ರಶ್ಯತೆ ಯ ವಿರುದ್ಧ ಕ್ರಾಂತಿಯನ್ನೇ ಸ್ರಷ್ಟಿಸಿ ಎಲ್ಲಾ ಜಾತಿ ಒಂದೇ, ಒಂದೇ ಮತ, ಒಂದೇ ದೇವರು ಎಂದು ಸಾರಿದ ಮಹಾನ್ ಗುರುಗಳ ಬಗೆಗಿನ ಪಠ್ಯವನ್ನು ಕೈ ಬಿಡುವ ಹಿಂದೆ ಜಾತಿ ವ್ಯವಸ್ಥೆಯ ಪಿತೂರಿ ಅಡಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಈ ಪಠ್ಯದಲ್ಲಿ ಸಮಾಜಕ್ಕೆ ಮಾರಕ ಆಗುವಂತಹದ್ದೇನಿದೆ ಘನತೆವೆತ್ತ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಬಿಲ್ಲವ ಸಮಾಜದವರು ಒತ್ತಾಯಿಸಿದ್ದಾರೆ.

error: No Copying!