ಕುಂದಾಪುರ: ದಿನಾಂಕ 23/04/2026 (ಹಾಯ್ ಉಡುಪಿ ನ್ಯೂಸ್) ಹಟ್ಟಿಯಂಗಡಿ ಗ್ರಾಮದ ಮಾರಲಾ ದೇವಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದ ಒಂಭತ್ತು ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್ ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ.ಎಸ್, ಅವರು ದಿನಾಂಕ:21-04-2026 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 11:30 ಗಂಟೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿನ ಹಟ್ಟಿಯಂಗಡಿ ಗ್ರಾಮದ ಮಾರಲಾ ದೇವಿ ದೇವಸ್ಥಾನದ ಬಸ್ ಸ್ಟ್ಯಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನ ಹುಡುಗರು ಏರುದನಿಯಲ್ಲಿ ಮಾತನಾಡುತ್ತ, ಪರಸ್ಪರ ಕೈಕೈಮಿಲಾಯಿಸುತ್ತ ಜಗಳವಾಡುತ್ತಿದ್ದುದನ್ನು ನೋಡಿ ಪೊಲೀಸರು ಅವರ ಬಳಿ ಹೋಗಿದ್ದು ಆಗ 7 ಜನ ಹುಡುಗರು ಓಡಿ ಹೋಗಿದ್ದು ಸಿಕ್ಕಿರುವ ಇಬ್ಬರನ್ನು ವಿಚಾರಿಸಿ ಹೆಸರು ವಿಳಾಸ ಕೇಳಿದಾಗ ಪ್ರಜ್ವಲ್ (19), ಗೋಳಿಕೆರೆ , ಹಟ್ಟಿಯಂಗಡಿ ಗ್ರಾಮ, ಕುಂದಾಪುರ, 2) ಅಭಿಷೇಕ (24), ಗೋಳಿಕೆರೆ , ಹಟ್ಟಿಯಂಗಡಿ ಗ್ರಾಮ, ಕುಂದಾಪುರ ಎಂಬುದಾಗಿ ತಿಳಿಸಿದ್ದು,ಓಡಿ ಹೋದವರ ಬಗ್ಗೆ ವಿಚಾರಿಸಿದಾಗ 1) ರೋಹಿತ್, 2) ಕಾರ್ತಿಕ್, 3) ಸಾತ್ವಿಕ್ ಇವರುಗಳು ಕೊಟೇಶ್ವರದವರಾಗಿದ್ದು, 4) ಶಶಾಂಕ್ 5) ದಿಲೀಪ್ 6) ಸಮರ್ಥ 7) ಸೃಜನ್ ರವರು ಬಸ್ರೂರು ಗ್ರಾಮದ ಹಟ್ಟಿಕುದ್ರುವಿನವಾಗಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ.
ಆರೋಪಿತರುಗಳು ಪರಸ್ಪರ ಮಾತಿಗೆ ಮಾತು ಬೆಳೆಸಿ ಕೈ ಕೈ ಮಿಲಾಯಿಸುತ್ತಿದ್ದು ಸಾರ್ವಜನಿಕ ಶಾಂತಿಗೆ ಭಂಗವುಂಟಾಗುವ ರೀತಿಯಲ್ಲಿ ಜಗಳವಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 194(2) BNS ರಂತೆ ಪ್ರಕರಣ ದಾಖಲಾಗಿದೆ.
